ಗುರುವಾರ , ಮೇ 13, 2021
34 °C

ಗಾಲ್ಫ್: ಪ್ರಶಸ್ತಿ ಸನಿಹ ಅನುರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಲಂಕಾದ ಅನುರಾ ರೋಹಾನ ಇಲ್ಲಿ ನಡೆಯುತ್ತಿರುವ ಗ್ಲೋಬಲ್ ಗ್ರೀನ್ ಬೆಂಗಳೂರು ಓಪನ್ ಗಾಲ್ಫ್  ಟೂರ್ನಿಯ ಮೊದಲ ಎರಡು ಸುತ್ತುಗಳಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲರಾದರೂ ಮುನ್ನಡೆಯನ್ನು ಕಾಪಾಡಿಕೊಂಡಿದ್ದಾರೆ.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಶುಕ್ರವಾರ ಮೂರನೇ ಸುತ್ತಿನಲ್ಲಿ ಅವರು 71 ಅವಕಾಶಗಳನ್ನು ಬಳಸಿಕೊಂಡು ಸ್ಪರ್ಧೆ ಕೊನೆಗೊಳಿಸಿದರು. ಈ ಮೂಲಕ ಅನುರಾ ಒಟ್ಟು 207 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದ್ದಾರೆ.ಲಂಕಾದ ಸ್ಪರ್ಧಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಮುಖೇಶ್ ಕುಮಾರ್ (212) ಮೂರನೇ ಸುತ್ತಿನ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಶುಕ್ರವಾರ ಸ್ಪರ್ಧೆ ಕೊನೆಗೊಳಿಸಲು 70 ಅವಕಾಶಗಳನ್ನು ಬಳಸಿಕೊಂಡರು. ಪಾಪನ್ (214) ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.ಆರ್. ಶ್ರೀನಿವಾಸ್, ರಾಜು ಅಲಿ ಮೊಲ್ಲಾ ಮತ್ತು ಅಶೋಕ್ ಕುಮಾರ್ (ಎಲ್ಲರೂ 215) ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.