ಗಾಲ್ಫ್: ಫೈನಲ್‌ಗೆ ಚಿಕ್ಕರಂಗಪ್ಪ, ಗೌರಿ

7

ಗಾಲ್ಫ್: ಫೈನಲ್‌ಗೆ ಚಿಕ್ಕರಂಗಪ್ಪ, ಗೌರಿ

Published:
Updated:

ಬೆಂಗಳೂರು: ಕಳೆದ ಬಾರಿಯ ಚಾಂಪಿಯನ್ ಎಸ್. ಚಿಕ್ಕರಂಗಪ್ಪ ಅವರು 110ನೇ ಅಖಿಲ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಮತ್ತೆ ಪ್ರಶಸ್ತಿಯತ್ತ ಸಾಗಿದ್ದು, ಇನ್ನೊಂದು ದಿಟ್ಟ ಹೆಜ್ಜೆ ಇಟ್ಟರೆ ಸತತ ಗೆಲುವಿನ ಕನಸು ನನಸಾಗಲಿದೆ.ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಶನಿವಾರ ನಡೆದ ಸೆಮಿಫೈನಲ್ ಪೈಪೋಟಿಯಲ್ಲಿ ಸ್ಥಳೀಯ ಗಾಲ್ಫರ್ ಚಿಕ್ಕರಂಗಪ್ಪ ಅವರು ಎನ್.ತಂಗರಾಜ ವಿರುದ್ಧ ಜಯ ಸಾಧಿಸಿದರು. ರೋಚಕ ಘಟ್ಟದಲ್ಲಿ ಕೊನೆಗೊಂಡ ನಾಲ್ಕರ ಘಟ್ಟದ ಸ್ಪರ್ಧೆಯಲ್ಲಿ ನಿಖರವಾಗಿ ಕ್ಲಬ್ ಬೀಸಿ, ಯಶಸ್ಸು ಪಡೆದರು ಚಿಕ್ಕರಂಗಪ್ಪ. ಇನ್ನೊಂದು ಸೆಮಿಫೈನಲ್‌ನಲ್ಲಿ ಪ್ರೀತಮ್ ಹರಿದಾಸ್ ಅವರು ಉದಯನ್ ಮಾನೆ ಎದುರು ಯಶ ಪಡೆದರು.ಇದೇ ಕೋರ್ಸ್‌ನಲ್ಲಿ ನಡೆಯುತ್ತಿರುವ 94ನೇ ಮಹಿಳಾ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾನುವಾರ ದೆಹಲಿಯ ಗೌರಿಮೊಂಗಾ ಅವರು ಕಳೆದ ಬಾರಿಯ ಚಾಂಪಿಯನ್ ಶ್ರೇಯಾ ಘೈ ಅವರನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry