ಗಾಲ್ಫ್: ಭಾರತ ತಂಡದಲ್ಲಿ ಚಿಕ್ಕರಂಗಪ್ಪ

ಸೋಮವಾರ, ಮೇ 20, 2019
30 °C

ಗಾಲ್ಫ್: ಭಾರತ ತಂಡದಲ್ಲಿ ಚಿಕ್ಕರಂಗಪ್ಪ

Published:
Updated:

ಸಿಂಗಪುರ (ಪಿಟಿಐ): ಕರ್ನಾಟಕದ ಎಸ್. ಚಿಕ್ಕರಂಗಪ್ಪ ಸೇರಿದಂತೆ ಒಟ್ಟು ಆರು ಪ್ರಬಲ ಸ್ಪರ್ಧಿಗಳನ್ನು ಒಳಗೊಂಡ ಭಾರತ ಗಾಲ್ಫ್ ತಂಡ ಸಿಂಗಪುರ-ಐಸ್ಲೆಂಡ್ ಕ್ಲಬ್‌ನಲ್ಲಿ ಸೆ. 29ರಿಂದ ಅ. 2ರ ವರೆಗೆ ನಡೆಯಲಿರುವ ಏಷ್ಯನ್ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದೆ.ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದ ಅಭಿಜಿತ್ ಚಡಾ ಸೇರಿದಂತೆ ಒಟ್ಟು ಆರು ಸ್ಪರ್ಧಿಗಳು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕರ್ನಾಟಕದ ಖಾಲೀನ್ ಜೋಶಿ, ತ್ರಿಶೂಲ್ ಚಿನ್ನಪ್ಪ, ಅಂಗದ್ ಚೀಮಾ ಹಾಗೂ ಹನಿ ಬೈಸೊಯಿ ತಂಡದಲ್ಲಿರುವ ಇತರ ಸ್ಪರ್ಧಿಗಳು. ಈ ತಂಡ ಕಳೆದ ವರ್ಷದ ಏಷ್ಯಾ ಫಾಲ್ದೊ ಸರಣಿಯಲ್ಲಿ ಚಾಂಪಿಯನ್ ಆಗಿತ್ತು.ಇದರಲ್ಲಿ ಒಟ್ಟು 120 ಗಾಲ್ಫರ್‌ಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಏಷ್ಯಾ ಫೆಸಿಫಿಕ್ ಗಾಲ್ಫ್  ಒಕ್ಕೂಟ (ಎಪಿಜಿಸಿ) ಈ ಚಾಂಪಿಯನ್‌ಷಿಪ್ ಆಯೋಜಿಸಿದೆ.ಇಲ್ಲಿ ಪ್ರಶಸ್ತಿ ಜಯಿಸಿದ ತಂಡ 2012ರ ಮಾಸ್ಟರ್ಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದೆ. ಹಾಗೆಯೇ ವಿಜೇತ ಹಾಗೂ ರನ್ನರ್ ಅಪ್ ತಂಡಗಳು ಮುಂದಿನ ವರ್ಷ ನಡೆಯುವ ಓಪನ್ ಚಾಂಪಿಯನ್‌ಷಿಪ್ ಅಂತರರಾಷ್ಟ್ರೀಯ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಅಡುವ ಅವಕಾಶ ಗಳಿಸಲಿದೆ. ಈ ಎಲ್ಲಾ ಕಾರಣದಿಂದ ಈ ಚಾಂಪಿಯನ್‌ಷಿಪ್‌ಗೆ ಹೆಚ್ಚು ಪ್ರಾಮುಖ್ಯತೆ ಲಭಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry