ಗಾಲ್ಫ್: ಭುಲ್ಲರ್‌ಗೆ ಪ್ರಶಸ್ತಿ

7

ಗಾಲ್ಫ್: ಭುಲ್ಲರ್‌ಗೆ ಪ್ರಶಸ್ತಿ

Published:
Updated:
ಗಾಲ್ಫ್: ಭುಲ್ಲರ್‌ಗೆ ಪ್ರಶಸ್ತಿ

ಮಕಾವ್ (ಪಿಟಿಐ): ಭಾರತದ ಗಗನ್‌ಜೀತ್ ಭುಲ್ಲರ್ ಭಾನುವಾರ ಇಲ್ಲಿ ಕೊನೆಗೊಂಡ ಮಕಾವ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು 68 ಅವಕಾಶಗಳನ್ನು ಬಳಸಿಕೊಂಡ ಭುಲ್ಲರ್, ಒಟ್ಟಾರೆ 268 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ನಿಂತರು. ಅಮೆರಿಕದ ಜೊನಾಥನ್ ಮೂರ್ (270) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.ಭಾರತದ ಶಿವ ಕಪೂರ್ ಐದನೇ ಸ್ಥಾನ ಪಡೆದರು. ಹಿಮ್ಮತ್ ರಾಯ್ 38 ಹಾಗೂ ಅಜಿತೇಶ್ ಸಂಧು 47ನೇ ಸ್ಥಾನ ಪಡೆದುಕೊಂಡರು. ಏಷ್ಯನ್ ಟೂರ್‌ನಲ್ಲಿ ಭುಲ್ಲರ್‌ಗೆ ದೊರೆತ ನಾಲ್ಕನೇ ಪ್ರಶಸ್ತಿ ಇದು.ಅವರು ಈ ಮೊದಲು 2009 ರಲ್ಲಿ ಇಂಡೊನೇಷ್ಯನ್ ಪ್ರೆಸಿಡೆಂಟ್ ಇನ್ವಿಟೇಶನಲ್ ಕಪ್, 2010 ರಲ್ಲಿ ಏಷ್ಯನ್ ಟೂರ್ ಇಂಟರ್‌ನ್ಯಾಷನಲ್ ಹಾಗೂ ಚೀನಾ ತೈಪೆಯಲ್ಲಿ ಇತ್ತೀಚೆಗೆ ನಡೆದ ಯಾಂಗ್ಡೆರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry