ಗಾಲ್ಫ್: ಮುನ್ನಡೆಯಲ್ಲಿ ಅನುರಾ

7

ಗಾಲ್ಫ್: ಮುನ್ನಡೆಯಲ್ಲಿ ಅನುರಾ

Published:
Updated:
ಗಾಲ್ಫ್: ಮುನ್ನಡೆಯಲ್ಲಿ ಅನುರಾ

ಬೆಂಗಳೂರು: ಶ್ರೀಲಂಕಾದ ಅನುರಾ ರೋಹಾನ ಇಲ್ಲಿ ನಡೆಯುತ್ತಿರುವ ಗ್ಲೋಬಲ್ ಗ್ರೀನ್ ಬೆಂಗಳೂರು ಓಪನ್ ಗಾಲ್ಫ್ ಟೂರ್ನಿಯ ಎರಡನೇ ಸುತ್ತಿನ ಬಳಿಕ ಮುನ್ನಡೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಗುರುವಾರ ಅವರು 68 ಅವಕಾಶಗಳನ್ನು ಬಳಸಿಕೊಂಡು ಎರಡನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಿದರು. ಮೊದಲ ಸುತ್ತಿನಲ್ಲೂ ಇಷ್ಟೇ ಸ್ಟ್ರೋಕ್‌ಗಳನ್ನು ಬಳಸಿಕೊಂಡಿದ್ದ ಅನುರಾ ಒಟ್ಟು 136 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ.ಮುಖೇಶ್ ಕುಮಾರ್ (142) ಎರಡನೇ ಸ್ಥಾನದಲ್ಲಿದ್ದಾರೆ. ಅವರು ಗುರುವಾರ 70 ಸ್ಟ್ರೋಕ್‌ಗಳನ್ನು ಬಳಸಿಕೊಂಡರು. ಕಳೆದ ಬಾರಿಯ ಚಾಂಪಿಯನ್ ಅಶೋಕ್ ಕುಮಾರ್ (143) ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ (74) ನಿರಾಸೆ ಅನುಭವಿಸಿದ್ದ ಅಶೋಕ್ ಎರಡನೇ ಸುತ್ತಿನಲ್ಲಿ (69) ಪ್ರಭಾವಿ ಪ್ರದರ್ಶನ ನೀಡಿದರು.ಅಭಿಷೇಕ್ ಜಾ (143) ಮತ್ತು ಅಜಿತೇಶ್ ಸಂಧು (143) ಅವರು ಅಶೋಕ್ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry