ಗಾಲ್ಫ್: ಮುನ್ನಡೆಯಲ್ಲಿ ತ್ರಿಶೂಲ್ ಚಿಣ್ಣಪ್ಪ

7

ಗಾಲ್ಫ್: ಮುನ್ನಡೆಯಲ್ಲಿ ತ್ರಿಶೂಲ್ ಚಿಣ್ಣಪ್ಪ

Published:
Updated:

ಬೆಂಗಳೂರು: ಸ್ಥಳೀಯ ಪ್ರತಿಭೆ ತ್ರಿಶೂಲ್‌ ಚಿಣ್ಣಪ್ಪ ಇಲ್ಲಿ ಆರಂಭವಾದ ಟಾಟಾ ಸ್ಟೀಲ್‌ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಚಾಂಪಿಯ­ನ್‌ಷಿಪ್‌ನ ಮೊದಲ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.ಕರ್ನಾಟಕ ಗಾಲ್ಫ್‌ ಸಂಸ್ಥೆ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನದ ಸ್ಪರ್ಧೆ ಕೊನೆಗೊಳಿಸಲು ತ್ರಿಶೂಲ್‌ 69 ಅವಕಾಶಗಳನ್ನು ಬಳಸಿಕೊಂಡರು.ವಶಿಷ್ಠ ಪವಾರ್‌ (70) ಎರಡನೇ ಸ್ಥಾನದಲ್ಲಿದ್ದಾರೆ. ತಲಾ 71 ಅವಕಾಶ­ಗಳನ್ನು ಬಳಸಿಕೊಂಡ ಉದಯನ್‌ ಮಾನೆ, ನಿಖಿಲ್‌ ಎಸ್‌. ಶೇಖಾವತ್‌ ಮತ್ತು ಅಮನ್‌ ರಾಜ್‌ ಜಂಟಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿ­ದ್ದಾರೆ. ಸೈಯದ್‌ ಸಕೀಬ್‌ ಮತ್ತು ಕರಣ್‌ ಮೊದಲ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಬ್ಬರೂ ಕ್ರಮವಾಗಿ 75 ಹಾಗೂ 77 ಅವಕಾ­ಶಗಳನ್ನು ಬಳಸಿಕೊಂಡರು.ಪ್ರಶ­ಸ್ತಿಯ ಕನಸು ಜೀವಂತವಾಗಿ­ರಿಸಿಕೊಳ್ಳಬೇ­ಕಾ­ದರೆ ಇಬ್ಬರೂ ಎರಡನೇ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವುದು ಅನಿವಾರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry