ಗಾಲ್ಫ್: ಮುನ್ನಡೆಯಲ್ಲಿ ನೇಹಾ ತ್ರಿಪಾಠಿ

7

ಗಾಲ್ಫ್: ಮುನ್ನಡೆಯಲ್ಲಿ ನೇಹಾ ತ್ರಿಪಾಠಿ

Published:
Updated:
ಗಾಲ್ಫ್: ಮುನ್ನಡೆಯಲ್ಲಿ ನೇಹಾ ತ್ರಿಪಾಠಿ

ಬೆಂಗಳೂರು:  ಕೋಲ್ಕತ್ತದ ಯುವ ಆಟಗಾರ್ತಿ ನೇಹಾ ತ್ರಿಪಾಠಿ ಇಲ್ಲಿ ಆರಂಭವಾದ ಹೀರೋ ಮೊಟೊ ಕಾರ್ಪ್ ಮಹಿಳೆಯರ ವೃತ್ತಿಪರ ಗಾಲ್ಫ್  ಚಾಂಪಿಯನ್‌ಷಿಪ್‌ನ ಮೂರನೇ ಲೆಗ್‌ನಲ್ಲಿ ಮೊದಲ ದಿನದ ಅಂತ್ಯಕ್ಕೆ ಮುನ್ನಡೆ ಸಾಧಿಸಿದ್ದಾರೆ.ಸಮರ್ಥವಾಗಿ ನಾಲ್ಕು ನಿಖರ ಕ್ಲಬ್‌ಗಳನ್ನು ಬೀಸಿದ ನೇಹಾ (66) ಕಲೆ ಹಾಕಿದರು. ಈ ಮೂಲಕ ಮೊದಲ ದಿನ ಮುನ್ನಡೆ ಗಳಿಸಿದರು. ದೆಹಲಿಯ ನಳಿನಿ ಸಿಂಗ್ ಸಿವಾಚಿ  (68) ಎರಡನೇ ಸ್ಥಾನದಲ್ಲಿದ್ದಾರೆ.`ನನಗೆ ನಿಜಕ್ಕೂ ಖುಷಿಯಾಗಿದೆ. ಆರಂಭದ ದಿನವೇ ಉತ್ತಮ ಬುನಾದಿ ಹಾಕಿದ್ದೇನೆ. ಇದೇ ಪ್ರದರ್ಶನವನ್ನು ಮುಂದಿನ ಸುತ್ತುಗಳಲ್ಲಿ ಮುಂದುವರಿಸಿ ಕೊಂಡು ಹೋಗುವುದು ಮುಖ್ಯ~ ಎಂದು ನೇಹಾ ಪ್ರತಿಕ್ರಿಯಿಸಿದರು.

ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿರುವ ಶರ್ಮಿಳಾ ನಿಕೋಲೆಟ್ 78 ಪಾಯಿಂಟ್ ಗಳಿಸಿ ಆರನೇ ಸ್ಥಾನ ಪಡೆದರು.ಎರಡನೇ ಸ್ಥಾನ ಪಡೆದಿರುವ ನಳಿನಿ ಸಿಂಗ್ ಹಾಗೂ ಮೂರನೇ ಸ್ಥಾನದಲ್ಲಿರುವ ಅದಿತಿ ಅಶೋಕ್ ಅವರ ನಡುವೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಎರಡನೇ ಲೆಗ್‌ನ ಚಾಂಪಿಯನ್ ಸ್ಮೃತಿ ನೆಹ್ರಾ (71) ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.ಮಂಗಳವಾರದ ಅಂತ್ಯಕ್ಕೆ ಮುನ್ನಡೆಯಲ್ಲಿದ್ದವರು: ನೇಹಾ ತ್ರಿಪಾಠಿ (66), ನಳಿನಿ ಸಿಂಗ್ ಸಿವಾಚಿ (68), ಅದಿತಿ ಅಶೋಕ್ (69), ಸ್ಮೃತಿ ಮೆಹ್ರಾ (71), ರಾಣಿ ಸೊಂತಿ (76), ಶರ್ಮಿಳಾ ನಿಕೋಟಿನ್ (78), ಶಣಯ್ಯಾ ಶರ್ಮ (79), ನಿಕ್ಕಿ ಪೊನ್ನಪ್ಪ, ಮೇಘನಾ ಬಾಲ್ ಹಾಗೂ ಪ್ರೀತಿಂದರ್ ಕೌರ್ (ತಲಾ 80).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry