ಗಾಲ್ಫ್: ಸ್ಮೃತಿ ಮೆಹ್ರಾ ಚಾಂಪಿಯನ್

7

ಗಾಲ್ಫ್: ಸ್ಮೃತಿ ಮೆಹ್ರಾ ಚಾಂಪಿಯನ್

Published:
Updated:
ಗಾಲ್ಫ್: ಸ್ಮೃತಿ ಮೆಹ್ರಾ ಚಾಂಪಿಯನ್

ಬೆಂಗಳೂರು: ಕೊನೆಯ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಮೃತಿ ಮೆಹ್ರಾ ಇಲ್ಲಿ ನಡೆದ `ಹೀರೊ ಮೊಟೊ ಕಾರ್ಪ್~ ಮಹಿಳಾ ವೃತ್ತಿಪರ ಗಾಲ್ಫ್ ಚಾಂಪಿಯನ್‌ಷಿಪ್‌ನ ಎರಡನೇ ಲೆಗ್‌ನಲ್ಲಿ ಚಾಂಪಿಯನ್ ಆದರು.ಈಗಲ್ಟನ್ ಗಾಲ್ಫ್  ರೆಸಾರ್ಟ್ ಕೋರ್ಸ್‌ನಲ್ಲಿ ಗುರುವಾರ ಮೂರನೇ ಸುತ್ತಿನಲ್ಲಿ ಅನುಭವಿ ಆಟಗಾರ್ತಿ ಸ್ಮೃತಿ ಕೇವಲ 67 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಮೂರು ಸುತ್ತುಗಳ ಬಳಿಕ ಅವರು ಒಟ್ಟು 206 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನ ಪಡೆದರು.ಎರಡನೇ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದ ಬೆಂಗಳೂರಿನ ಶರ್ಮಿಳಾ ನಿಕೋಲೆಟ್ (208) ಅಂತಿಮ ಸುತ್ತಿನಲ್ಲಿ 71 ಸ್ಟ್ರೋಕ್‌ಗಳನ್ನು ತೆಗೆದುಕೊಂಡರು. ಇದರಿಂದ ಸ್ಮೃತಿ ಅವರಿಗಿಂತ ಎರಡು ಸ್ಟ್ರೋಕ್‌ಗಳ ಹಿನ್ನಡೆ ಅನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಅಂತಿಮ ಸುತ್ತಿನಲ್ಲಿ ಇವರಿಬ್ಬರ ನಡುವೆ ತುರುಸಿನ ಪೈಪೋಟಿ ನಡೆಯಿತು. ಗುರುವಾರದ 18 `ಹೋಲ್~ಗಳ ಸ್ಪರ್ಧೆಯಲ್ಲಿ ಕೊನೆಯ ಐದು `ಹೋಲ್~ಗಳವರೆಗೂ ಸ್ಮೃತಿ ಮೂರು ಸ್ಟ್ರೋಕ್‌ಗಳ ಹಿನ್ನಡೆಯಲ್ಲಿದ್ದರು. ಕೊನೆಯಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಅದ್ಭುತ ನಿಖರತೆ ತೋರಿದರಲ್ಲದೆ, ಶರ್ಮಿಳಾ ಅವರನ್ನು ಹಿಂದಿಕ್ಕಿ ಚಾಂಪಿಯನ್ ಆದರು.ನಳಿನಿ ಸಿಂಗ್ ಸಿವಾಚ್ (210) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಕೊನೆಯ ಸುತ್ತಿನಲ್ಲಿ ನಳಿನಿ (69) ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಕಳೆದ ವಾರ ನಡೆದ ಮೊದಲ ಲೆಗ್‌ನ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ನೇಹಾ ತ್ರಿಪಾಠಿ (213) ನಾಲ್ಕನೇ ಸ್ಥಾನ ಪಡೆದರು.ಅಮೆಚೂರ್ ಸ್ಪರ್ಧಿ ಅದಿತಿ ಅಶೋಕ್ (216), ಸಾನಿಯಾ ಶರ್ಮಾ (217) ಮತ್ತು ಮೇಘನಾ ಬಾಲ್ (225) ಅವರು ಕ್ರಮವಾಗಿ ಐದರಿಂದ ಎಂಟರವರೆಗಿನ ಸ್ಥಾನ ತಮ್ಮದಾಗಿಸಿಕೊಂಡರು. ಅಮೆಚೂರ್ ವಿಭಾಗದಲ್ಲಿ ಅದಿತಿ ಚಾಂಪಿಯನ್ ಆದರು. ಮೊದಲ ಲೆಗ್‌ನಲ್ಲೂ ಅವರು ಅಗ್ರಸ್ಥಾನ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry