ಶನಿವಾರ, ಡಿಸೆಂಬರ್ 7, 2019
25 °C

ಗಾಳಿಪಟ ಉತ್ಸವ

Published:
Updated:
ಗಾಳಿಪಟ ಉತ್ಸವ

ಗಲ್ಲಿಯಲ್ಲಿರುವ ಪೆಟ್ಟಿ ಅಂಗಡಿಯೊಂದರಲ್ಲಿ ಬಣ್ಣಬಣ್ಣದ ಕಾಗದಗಳನ್ನು ತಂದು, ಹಂಚಿ ಕಡ್ಡಿಗಳಿಂದ ಹಂದರ ರಚಿಸಿ, ಭಾವನೆ ಎಂಬ ಅಂಟನ್ನು ಅಂಟಿಸಿ, ಕನಸಿನ ಬಾಲಂಗೋಚಿ ಕಟ್ಟಿ ಗಾಳಿಪಟವನ್ನು ಮುಗಿಲೆತ್ತರಕ್ಕೆ ಹಾರಿಸಿ ಖುಷಿಪಡುತ್ತಿದ್ದ ದೃಶ್ಯ ಕಂಡುಬಂದಿದ್ದು ಗಾಳಿಪಟ ಉತ್ಸವದಲ್ಲಿ.

ಆರ್‌ಟಿ ನಗರದಲ್ಲಿರುವ ವಿದ್ಯಾಂಜಲಿ ಅಕಾಡೆಮಿ ನಿರ್ದೇಶಕಿ ರೇಖಾ ರೆಡ್ಡಿ ಈ ಗಾಳಿಪಟ ಉತ್ಸವ ಆಯೋಜಿಸಿದ್ದರು. ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಪಾಲ್ಗೊಂಡಿದ್ದವು. ಚಿಣ್ಣರು ಸೇರಿದಂತೆ ಎಲ್ಲರೂ ಗಾಳಿಪಟ ಹಾರಿಸಿ ಖುಷಿಪಟ್ಟರು. ಆಕರ್ಷಕ ಗಾಳಿಪಟ ತಯಾರಿಕೆಯಲ್ಲಿ ಹೆಸರು ಮಾಡಿ, ಗಿನ್ನೆಸ್ ದಾಖಲೆ ನಿರ್ಮಿಸಿರುವ ರಮೇಶ್ ಬಾಬು ಮಕ್ಕಳು ಗಾಳಿಪಟ ತಯಾರಿಸಲು ನೆರವು ನೀಡಿದರು.

ಪ್ರತಿಕ್ರಿಯಿಸಿ (+)