ಮಂಗಳವಾರ, ಜನವರಿ 28, 2020
19 °C

ಗಾಳಿಪಟ ಹಾರಿಸಿದ ದಿಲೀಪ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಸಂಕ್ರಾಂತಿ ದಿನ ಗಾಳಿಪಟ ಹಾರಿಸುವುದು ಚಿಣ್ಣರಿಗಷ್ಟೇ ಸಂಭ್ರಮವಲ್ಲ. ಬಾಲಿವುಡ್‌ನಲ್ಲಿ ದಂತಕತೆಯಾಗಿರುವ ನಟ ದಿಲೀಪ್ ಕುಮಾರ್ ಸಹ ಗಾಳಿಪಟ ಅಂದರೆ ಹಿರಿ, ಹಿರಿ ಹಿಗ್ಗುತ್ತಾರೆ.ಮುಂಬೈನಲ್ಲಿ ಆಕಾಶವೇ ಕಾಣದಂತೆ ಕಟ್ಟಡಗಳು ಎದ್ದಿದ್ದರೂ 89 ವರ್ಷದ ಈ ಹಿರಿಯ ನಟ ಉತ್ಸಾಹ ಕಳೆದುಕೊಂಡಿಲ್ಲ.ಎಲ್ಲೆಲ್ಲಿಂದಲೋ ಸಂಗ್ರಹಿಸಿರುವ ಗಾಳಿಪಟಗಳ ಪೆಟ್ಟಿಗೆಯನ್ನು ಭಾನುವಾರ ತೆರೆದೇಬಿಟ್ಟರು. ಟೆರೇಸ್‌ಗೆ ಹೋಗಿ ಗಾಳಿಪಟ ಹಾರಿಸಿದರು.ಗಾಳಿಪಟ ಯಶಸ್ವಿಯಾಗಿ ಹಾರಿಸಿದ ನಂತರ, ಅವು ಆಗಸದಲ್ಲಿ ಏರುವುದನ್ನು ನೋಡುವುದೇ ದೊಡ್ಡ ಥ್ರಿಲ್ ಎಂದು ಟ್ವಿಟರ್‌ನಲ್ಲಿ ಅವರು ಬರೆದಿದ್ದಾರೆ.

ಪ್ರತಿಕ್ರಿಯಿಸಿ (+)