ಸೋಮವಾರ, ನವೆಂಬರ್ 18, 2019
23 °C

ಗಾಳಿಸುದ್ದಿಗೆ ಹನ್ಸಿಕಾ ಉತ್ತರ

Published:
Updated:

ದಕ್ಷಿಣದ ಚೆಲುವೆ ಹನ್ಸಿಕಾ ಮೋಟ್ವಾನಿ ಮತ್ತು ತಮಿಳು ನಟ ಸಿಂಬು ನಡುವೆ ಕುಚ್ ಕುಚ್ ನಡೆಯುತ್ತಿದೆ ಅಂಠಿ ಕಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಈ ವಿಷಯವನ್ನು ಸ್ವತಃ ಕೇಳಿಸಿಕೊಂಡ ಹನ್ಸಿಕಾ, `ನಮ್ಮಿಬ್ಬರ ನಡುವೆ ಅಂಥದ್ದೇನೂ ನಡೆಯುತ್ತಿಲ್ಲ' ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.ಹನ್ಸಿಕಾ ಮತ್ತು ಸಿಂಬು `ವಾಲು' ಮತ್ತು `ವೆಟ್ಟೈ ಮನಾನ್' ಚಿತ್ರಗಳಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಇವರಿಬ್ಬರ ನಡುವೆ ಏನೋ ಇದೆ ಎಂಬ ಗಾಳಿಸುದ್ದಿ ಹಬ್ಬಿದೆ. `ನನ್ನ ಮತ್ತು ಸಿಂಬು ಮಧ್ಯೆ ಡೇಟಿಂಗ್ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುವುದನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿದ್ದೇನೆ. ಇದೆಲ್ಲಾ ಗಾಳಿಸುದ್ದಿಯಷ್ಟೆ. ಸಿಂಬು ಜತೆಗೆ ನಾನು ಡೇಟಿಂಗ್ ನಡೆಸುತ್ತಿಲ್ಲ. ಅಂಥದ್ದೊಂದು ಸುದ್ದಿಯನ್ನು ಗಾಳಿಯಲ್ಲಿ ತೇಲಿಬಿಟ್ಟವರ ಬಗ್ಗೆ ನಂಗೇನೂ ಕೋಪವಿಲ್ಲ. ಅದಕ್ಕೆ ನಕ್ಕು ಸುಮ್ಮನಾಗಿಬಿಟ್ಟೆ. ಒಂದು ವೇಳೆ ನಾನು ಯಾರನ್ನಾದರೂ ಪ್ರೀತಿಸಲು ಶುರುಮಾಡಿದರೆ ಆ ವಿಷಯವನ್ನು ಮೊದಲೇ ಮಾಧ್ಯಮದವರಿಗೆ ತಿಳಿಸುತ್ತೇನೆ' ಎಂದು ಹನ್ಸಿಕಾ ಟ್ವಿಟ್ ಮಾಡಿದ್ದಾರೆ.`ನನಗೆ ಗೊತ್ತು. ಸೆಲಬ್ರಿಟಿಗಳೆಲ್ಲಾ ಗಾಸಿಪ್‌ಗೆ ತುತ್ತಾದವರೇ. ಅದು ಅವರಿಗೆ ಮಾಮೂಲು. ಆದರೆ, ಇಂಥ ಸುದ್ದಿ ನನ್ನ ಅಭಿಮಾನಿಗಳಿಗೆ ತಪ್ಪು ಸಂದೇಶವನ್ನು ರವಾನಿಸುವ ಅಪಾಯವಿದೆ. ಆ ಬಗ್ಗೆ ನನಗೆ ಆತಂಕವಿದೆ. ಕೆಲ ನಟಿಯರು ಗಾಳಿಸುದ್ದಿಯನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡರೆ, ಮತ್ತೆ ಕೆಲವರು ಅದನ್ನು ತಲೆಗೆ ಹಚ್ಚಿಕೊಳ್ಳಲು ಹೋಗುವುದಿಲ್ಲ. ನಾನು ಎರಡನೇ ವರ್ಗಕ್ಕೆ ಸೇರಿದವಳು.ಗಾಳಿಸುದ್ದಿ ಪ್ರತಿ ದಿನ ಹುಟ್ಟುತ್ತಲೇ ಹುಟ್ಟುತ್ತದೆ, ಸಾಯುತ್ತದೆ. ಗಾಸಿಪ್‌ಗೆ ನಾನು ಕವಡೆ ಕಿಮ್ಮತ್ತನ್ನೂ ಕೊಡುವುದಿಲ್ಲ' ಎಂದಿದ್ದಾರೆ ಅವರು.

 

ಪ್ರತಿಕ್ರಿಯಿಸಿ (+)