ಗಾಳಿ-ಮಳೆ: ಉರುಳಿದ ವಿದ್ಯುತ್ ಕಂಬ, ಮರ

7

ಗಾಳಿ-ಮಳೆ: ಉರುಳಿದ ವಿದ್ಯುತ್ ಕಂಬ, ಮರ

Published:
Updated:

ಮಳವಳ್ಳಿ: ಸೋಮವಾರ ಬಿದ್ದ ಮಳೆ ಹಾಗೂ ಬೀಸಿದ ಗಾಳಿಗೆ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ಹಳೆಯದಾದ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿತ್ತು.ಸೋಮವಾರ ರಾತ್ರಿ 5 ಸೆಂ.ಮೀ.ಮಳೆ ಬಿದ್ದಿದ್ದು ಹೆಚ್ಚು ಗಾಳಿ ಬೀಸಿದ ಹಿನ್ನೆಲೆಯಲ್ಲಿ ಮರಗಳೂ ಉರುಳಿವೆ. ಇದರ ಜೊತೆಗೆ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.ಇದರಿಂದ ರಾತ್ರಿ ಕಡಿತಗೊಂಡ ವಿದ್ಯುತ್ ಸಂಪರ್ಕ ಮಂಗಳವಾರ ಸಂಜೆಯಾದರೂ ಸರಿಯಾಗಿರಲಿಲ್ಲ. ಮಧ್ಯಾಹ್ನವಾದರೂ ಮರ ತೆರವುಗೊಳಿಸುವ ಕೆಲಸವು ನಡೆದಿರಲಿಲ್ಲ. ನಂತರ ಮರ ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು.ಇದಲ್ಲದೇ ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ಚರಂಡಿ ಸಮರ್ಪಕವಾಗಿಲ್ಲದ ಕಾರಣ ಹಲವು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ಪರದಾಡುವಂತಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry