ಗುರುವಾರ , ಜನವರಿ 23, 2020
22 °C

ಗಾವಸ್ಕರ್ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸದ ಅವಧಿಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಕೋಪಕ್ಕೆ ಕಾರಣವಾಗಿದೆ.`ಆಟಗಾರರು ಕ್ರಿಕೆಟ್ ಆಡಲಿಕ್ಕಾಗಿ ಆಸ್ಟ್ರೇಲಿಯಕ್ಕೆ ತೆರಳಿದ್ದಾರೆಯೇ ಹೊರತು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲಿಕ್ಕಲ್ಲ~ ಎಂದು ನುಡಿದಿದ್ದಾರೆ. ಕೆಲವು ಆಟಗಾರರು ಅಭ್ಯಾಸದ ಅವಧಿಯನ್ನು ತಪ್ಪಿಸಿಕೊಂಡದ್ದೇ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಎಂಬುದು ಗಾವಸ್ಕರ್ ಹೇಳಿಕೆ.`ಆಸ್ಟ್ರೇಲಿಯದಲ್ಲಿ ಕ್ರಿಸ್‌ಮಸ್ ದೊಡ್ಡ ಹಬ್ಬ. ಆದ್ದರಿಂದ ಮೊದಲ ಟೆಸ್ಟ್ ಬಳಿಕ ಆಸೀಸ್ ಆಟಗಾರರು ಅಭ್ಯಾಸದಿಂದ ದೂರವುಳಿದು ಹಬ್ಬ ಆಚರಿಸಿದ್ದರು. ಆದರೆ ಭಾರತದ ಆಟಗಾರರು ಏನು ಮಾಡುತ್ತಿದ್ದರು? ಮೊದಲ ಟೆಸ್ಟ್ ಬಳಿಕ ಸರಿಯಾಗಿ ಅಭ್ಯಾಸ ನಡೆಸಿಲ್ಲ ಏಕೆ?~ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)