ಮಂಗಳವಾರ, ಮೇ 18, 2021
30 °C

`ಗಿಡ ನೆಟ್ಟರೆ ಭೂಮಿಗೆ ಋಣ ಸಂದಾಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವದಷ್ಟು ಗಿಡಗಳನ್ನು ನೆಟ್ಟು, ಪೋಷಿಸಿದರೂ ಸಾಕು. ಈ ಭೂಮಿಯಲ್ಲಿ ಹುಟ್ಟಿದ ನಾವು ಕಿರು ಕಾಣಿಕೆ ನೀಡಿದಂತಾಗುತ್ತದೆ, ಕೊಂಚ ಮಟ್ಟಿಗೆ ಋಣಸಂದಾಯ ಮಾಡಿದಂತಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಅಭಿಪ್ರಾಯಪಟ್ಟರು.

ವಿಶ್ವಪರಿಸರ ದಿನದ ಅಂಗವಾಗಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಿಂದ ದಿಬ್ಬೂರಹಳ್ಳಿ ರಸ್ತೆಯ ಹೊಸ ನ್ಯಾಯಾಲಯ ಕಟ್ಟಡದವರೆಗಿನ ರಸ್ತೆ ವಿಭಜಕ ಹಾಗೂ ಅಕ್ಕಪಕ್ಕದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮನುಷ್ಯನ ದುರಾಸೆಗೆ ಇಂದು ಪರಿಸರ ನಾಶವಾಗುತ್ತಿದೆ. ಇಂದು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಸರ ನಾಶವೇ ಮುಖ್ಯ ಕಾರಣ. ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಅನಾರೋಗ್ಯದಿಂದ ಬಳಲುವಂತಾದರೆ ಅದಕ್ಕೆ ನಾವೇ ಕಾರಣರಾಗಬೇಕಾಗುತ್ತದೆ ಎಂದು ಹೇಳಿದರು.ಮಿನಿ ವಿದಾನಸೌಧದ ಪಕ್ಕ ಪುರಸಭೆ ಅಂಗಡಿಗಳ ಮುಂಭಾಗದಲ್ಲಿಯೂ ಗಿಡಗಳನ್ನು ನೆಟ್ಟಿದ್ದು, ಆಯಾ ಅಂಗಡಿಯವರೆ ಗಿಡಗಳ ಆರೈಕೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಅಂಗಡಿಗಳ ಮಾಲೀಕರಿಗೆ ಸೂಚಿಸಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ್ ಅರಸ್, ಸರ್ಕಾರಿ ಅಭಿಯೋಜಕ ಈ.ಡಿ.ಶ್ರಿನಿವಾಸ್, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ತಹಶೀಲ್ದಾರ್ ಟಿ.ಎ.ಹನುಮಂತರಾಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಎಚ್.ಸಿ.ಹನುಮಂತೇಗೌಡ, ಅರಣ್ಯ ಇಲಾಖೆಯ ಶ್ರಿನಿವಾಸಮೂರ್ತಿ, ಶಂಕರಪ್ಪ, ಸಿಡಿಪಿಒ ಪ್ರಕಾಶ್‌ಕುಮಾರ್, ಬೆಸ್ಕಾಂನ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.