ಗುರುವಾರ , ಫೆಬ್ರವರಿ 25, 2021
30 °C

ಗಿಣಿಗೇರಾ- ರಾಯಚೂರು ರೈಲು ಯೋಜನೆ: ಪರೀಕ್ಷಾರ್ಥ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿಣಿಗೇರಾ- ರಾಯಚೂರು ರೈಲು ಯೋಜನೆ: ಪರೀಕ್ಷಾರ್ಥ ಸಂಚಾರ

ಗಂಗಾವತಿ: ಗಿಣಿಗೇರಾ- ರಾಯಚೂರು ಮಾರ್ಗದ ರೈಲ್ವೆ ಕಾಮಗಾರಿ ಶೇ 70ರಷ್ಟು ಮುಕ್ತಾಯವಾಗಿದ್ದು, ಗಿಣಿಗೇರಾದಿಂದ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದವರೆಗೆ ಪರೀಕ್ಷಾರ್ಥ ರೈಲು ಸಂಚಾರವನ್ನು ಗುರುವಾರ ನಡೆಸಲಾಯಿತು.ಕೊಪ್ಪಳ ತಾಲ್ಲೂಕಿನ ಗಿಣಿಗೇರಾದಿಂದ ಹೊರಟ ಪರೀಕ್ಷಾರ್ಥ ರೈಲ್ವೆ ಎಂಜಿನ್, ಮುಕ್ಕುಂಪಿ ಮಾರ್ಗವಾಗಿ 27 ಕಿ.ಮೀ. ಅಂತರದ ಚಿಕ್ಕಬೆಣಕಲ್ ಗ್ರಾಮಕ್ಕೆ ತಲುಪಿತು.‘ಚಿಕ್ಕಬೆಣಕಲ್ ಗ್ರಾಮದಿಂದ ಗಂಗಾವತಿ ನಗರಕ್ಕೆ ಕೇವಲ 12 ಕಿ.ಮೀ. ಅಂತರವಿದ್ದು, ಮಾರ್ಚ್‌ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಆ ಬಳಿಕ 2016ರ ಡಿಸಂಬರ್ ಅಂತ್ಯಕ್ಕೆ ಗಂಗಾವತಿ ಗಿಣಿಗೇರಾ ಮಾರ್ಗದಲ್ಲಿ ರೈಲು ಓಡಿಸುವ ಗುರಿ ಇದೆ’ ಎಂದು ರೈಲ್ವೆ ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.