ಗಿನ್ನಿಸ್ ದಾಖಲೆಗೆ ಕೂಚಿಪುಡಿ ನೃತ್ಯ

7

ಗಿನ್ನಿಸ್ ದಾಖಲೆಗೆ ಕೂಚಿಪುಡಿ ನೃತ್ಯ

Published:
Updated:

ಹೈದರಾಬಾದ್ (ಪಿಟಿಐ): ಇಲ್ಲಿಯ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಅಂತರರಾಷ್ಟ್ರೀಯ ಕೂಚಿಪುಡಿ ನೃತ್ಯ ಸಮ್ಮೇಳನದಲ್ಲಿ ಮಂಗಳವಾರ ರಾತ್ರಿ ವಿವಿಧ ವಯೋಮಾನದ 5,974 ನೃತ್ಯ ಪಟುಗಳು ಏಕಕಾಲಕ್ಕೆ ಪ್ರದರ್ಶಿಸಿದ ಕೂಚಿಪುಡಿ ನೃತ್ಯ ಗಿನ್ನಿಸ್ ವಿಶ್ವದಾಖಲೆಯ ಪುಟಗಳನ್ನು ಸೇರಿದೆ.ಅನಿವಾಸಿ ತೆಲುಗು ಭಾಷಿಕರ `ಸಿಲಿಕಾನ್ ಆಂಧ್ರ' ಎಂಬ ಸಂಘಟನೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಪ್ರದರ್ಶಿಸಲಾದ ಈ ನೃತ್ಯ `ಅತಿ ದೊಡ್ಡ ಕೂಚಿಪುಡಿ ನೃತ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry