ಗುರುವಾರ , ಜನವರಿ 23, 2020
28 °C

ಗಿರಿಗಿಟ್ಲೆಯಲ್ಲ, ಇದು ಗೆಲಾಕ್ಸಿ ಯಂತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿರಿಗಿಟ್ಲೆಯಲ್ಲ, ಇದು ಗೆಲಾಕ್ಸಿ ಯಂತ್ರ!

ಹುಬ್ಬಳ್ಳಿ: ಜಾತ್ರೆಯಲ್ಲಿ ಗಿರಿಗಿಟ್ಲೆಯಂತೆ ಕಾಣುವ ಯಂತ್ರವೊಂದು ಕಳೆದೊಂದು ವಾರದಿಂದ ಉಣಕಲ್ ಸಿದ್ದಪ್ಪಜ್ಜನ ಗುಡಿ ಹಾಗೂ ಕೆರೆಯ ಮುಂಭಾಗದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.ರಸ್ತೆಯ ಅರ್ಧಭಾಗವನ್ನು ಆಕ್ರಮಿಸಿ ತೊಟ್ಟಿಲಿನ ಆಕಾರದಲ್ಲಿ ನಿಲ್ಲುವ ಈ ಯಂತ್ರ ಉಣಕಲ್ ಭಾಗದಲ್ಲಿ ಮಣ್ಣಿನ ಪರೀಕ್ಷೆ ನಡೆಸುತ್ತಿದೆ.ಬಿಆರ್‌ಟಿಎಸ್ ಯೋಜನೆಯಡಿ ನೂತನವಾಗಿ ನಿರ್ಮಾ­ಣವಾಗುತ್ತಿರುವ ಬಸ್ ಸಂಚಾರದ ದಾರಿ­ಗಾಗಿ ಫ್ಲೈಓವರ್ ನಿರ್ಮಿಸಲಾಗುತ್ತಿದ್ದು, ಕಾಮ­ಗಾರಿಗೆ ಮಣ್ಣು ಸೂಕ್ತವಾಗಿದೆಯೇ ಎಂಬು­ದನ್ನು ತಿಳಿಯಲು ಕಳೆ­ದೊಂದು ವಾರದಿಂದ ಈ ಪರೀಕ್ಷೆ ಆರಂಭಿಸಲಾಗಿದೆ.ಫ್ಲೈಓವರ್ ನಿರ್ಮಾಣಕ್ಕೆ ಪ್ರತಿ 75 ಮೀಟರ್ ದೂರಕ್ಕೆ ಒಂದರಂತೆ ಪಿಲ್ಲರ್ ಗಳನ್ನು (ಆಧಾರ ಕಂಬ) ನಿರ್ಮಿಸಲಾಗುತ್ತಿದೆ. ಅದಕ್ಕೆ ಪೂರ್ವ­ಭಾವಿ­­ಯಾಗಿ ನಗರದ ಪಾಟೀಲ್ ಎಂಜಿನಿಯರ್ಸ್ ಮತ್ತು ಕಂಟ್ರಾಕ್ಟರ್ಸ್ ಸಂಸ್ಥೆ ಮಣ್ಣು ಪರೀಕ್ಷೆ ಕೈ­ಗೊಂಡಿದೆ ಎನ್ನುತ್ತಾರೆ ಸಂಸ್ಥೆ ತಂತ್ರಜ್ಞ ಕಿರಣ್ ಗೌಡ.ರಸ್ತೆ ಮಧ್ಯದಿಂದ ರಂಧ್ರ ಕೊರೆದು ಅಲ್ಲಿಂದ ಪಕ್ಕದ ಮಣ್ಣಿನ ಕಾಲುವೆಗೆ ನಿರಂತರ ನೀರು ಹರಿಸುವ ಹಾಗೂ ತಾಂತ್ರಿಕ, ರಾಸಾಯನಿಕ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಮಣ್ಣಿನ ಪರೀಕ್ಷೆ ಮಾಡಲಾಗುತ್ತದೆ ಎನ್ನುವ ಕಿರಣ್, ‘ಗೆಲಾಕ್ಸಿ’ ಎಂದು ಕರೆಯಲಾಗುವ ಈ ಯಂತ್ರ ಒಂದೆಡೆ ಸತತ ಮೂರು ದಿನ ಕೆಲಸ ಮಾಡಿ ಮಣ್ಣಿನ ಗುಣಮಟ್ಟದ ಕುರಿತಾದ ಫಲಿತಾಂಶ ನೀಡುತ್ತದೆ. ಮಣ್ಣು ಪರೀಕ್ಷೆಗಾಗಿ ಅಗೆಯಲಾಗಿರುವ ರಸ್ತೆಯನ್ನು ಫಲಿತಾಂಶದ ನಂತರ ಮತ್ತೆ ಮೊದಲಿನ ಸ್ಥಿತಿಗೆ ದುರಸ್ತಿಗೊಳಿಸುವುದಾಗಿ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)