ಗಿರಿಯಾಸ್‌ನಲ್ಲಿ 40 ರೂ ಜಾದೂ

7

ಗಿರಿಯಾಸ್‌ನಲ್ಲಿ 40 ರೂ ಜಾದೂ

Published:
Updated:
ಗಿರಿಯಾಸ್‌ನಲ್ಲಿ 40 ರೂ ಜಾದೂ

`ಗಿರಿಯಾಸ್~ ತನ್ನ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ಹಾಗೂ ಉತ್ತಮ ಸೇವೆ ಒದಗಿಸುವ ಮೂಲಕ ಜನಮನ್ನಣೆ ಪಡೆದುಕೊಂಡಿದೆ. ಅದಕ್ಕೀಗ ಖ್ಯಾತಿಯ ಉತ್ತುಂಗದ ಸಡಗರ. ಏಕೆಂದರೆ ಗಿರಿಯಾಸ್ ಟ್ರಸ್ಟ್‌ಗೆ ಈಗ 40 ತುಂಬಿದೆ. ಅದಕ್ಕಾಗಿಯೇ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.ಈ ಸಂಭ್ರಮಾಚರಣೆ ಅಂಗವಾಗಿ ಶುಕ್ರವಾರದಿಂದ ಸೋಮವಾರದ ವರೆಗೆ (ಆ. 5- 8) ಗಿರಿಯಾಸ್‌ನಲ್ಲಿ ಕೊಳ್ಳುವ ಗ್ರಾಹಕರು ಸುಮಾರು 4 ಕೋಟಿ ರೂಪಾಯಿಯಷ್ಟು ಮೊತ್ತದ ಬಹುಮಾನ ಗೆಲ್ಲಬಹುದು.ಅಷ್ಟೇ ಅಲ್ಲ. ಬರೀ 40 ರೂಪಾಯಿ ಆರಂಭಿಕ ಪಾವತಿ ಮಾಡಿ  ತಮಗೆ ಬೇಕಾದ ವಸ್ತುವನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಬಾಕಿ ಹಣವನ್ನು ಬಡ್ಡಿ ಇಲ್ಲದೆ 10 ತಿಂಗಳಲ್ಲಿ ಕಂತಿನ ಮೂಲಕ ಕಟ್ಟಬಹುದು.ಇವೆಲ್ಲದರ ಜೊತೆಗೆ ರೆಫ್ರಿಜರೇಟರ್ ಕೊಂಡರೆ ಕೈಲಾಶ್ ಮಿಕ್ಸರ್ ಗ್ರೈಂಡರ್, ವಾಷಿಂಗ್ ಮೆಷಿನ್ ಕೊಂಡರೆ ರೈಸ್ ಕುಕ್ಕರ್ ಹೀಗೆ ಪ್ರತಿ ವಸ್ತುವಿನ ಜೊತೆ ಒಂದು ಆಕರ್ಷಕ ವಸ್ತುವನ್ನು ಉಚಿತವಾಗಿ ಪಡೆಯಬಹುದು.`ಗಿರಿಯಾಸ್ ಬೆಂಗಳೂರಿನಲ್ಲಿ 14, ಮಂಗಳೂರಿನಲ್ಲಿ 2 ಹಾಗೂ ಚೆನ್ನೈ, ಸೇಲಂ, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ತಲಾ ಒಂದು ಮಳಿಗೆ ಹೊಂದಿದೆ. ಪ್ರಸ್ತುತ ಒಂದು ಉತ್ತಮ ಶಾಂಪಿಂಗ್ ತಾಣ ಎಂಬ ಹೆಗ್ಗಳಿಕೆ ಪಡೆದಿದೆ.ಗ್ರಾಹಕ ಸ್ನೇಹಿ ಪರಿಸರ, ಸೇವೆಗೆ ಸದಾ ಸನ್ನದ್ಧವಾಗಿರುವ ತರಬೇತಿ ಪಡೆದ ಸಿಬ್ಬಂದಿ ಇದ್ದಾರೆ. 40 ವರ್ಷಗಳಿಂದ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡಿದ್ದೇವೆ. 1971ರಲ್ಲಿ ಗಾಂಧಿನಗರದಲ್ಲಿ ಪ್ರಾರಂಭಿಸಿ ಈಗ ನಗರದಲ್ಲಿ 14 ಮಳಿಗೆಗಳನ್ನು ಹೊಂದಿದ್ದೇವೆ.

 

ಈ ಮೂಲಕ ತನ್ನ ಸೇವೆಯ ಹರವು ಹೆಚ್ಚಿಸಿಕೊಂಡಿದ್ದೇವೆ. ಇದಕ್ಕೆಲ್ಲಾ ಗ್ರಾಹಕರ ಪ್ರೋತ್ಸಾಹವೇ ಕಾರಣ. ನಮ್ಮ ಯಶಸ್ಸು ಅವರಿಗೆ ಸಲ್ಲಬೇಕು~ ಎನ್ನುತ್ತಾರೆ ಗಿರಿಯಾಸ್ ನಿರ್ದೇಶಕ ನವೀನ್ ಗಿರಿಯಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry