ಗಿರೀಶ್‌ಗೆ ಕಾರು ಉಡುಗೊರೆ

7

ಗಿರೀಶ್‌ಗೆ ಕಾರು ಉಡುಗೊರೆ

Published:
Updated:
ಗಿರೀಶ್‌ಗೆ ಕಾರು ಉಡುಗೊರೆ

ಬೆಂಗಳೂರು: ಲಂಡನ್ ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ನಲ್ಲಿ ರಜತ ಪದಕ ಗೆದ್ದ ಕರ್ನಾಟಕದ ಎಚ್.ಎನ್.ಗಿರೀಶ್ ಅವರಿಗೆ ಮಲ್ಲೇಶ್ವರಂ ಸ್ಪೋರ್ಟ್ಸ್ ಪ್ರತಿಷ್ಠಾನವು 7.5 ಲಕ್ಷ   ರೂಪಾಯಿ ಮೌಲ್ಯದ  ಕಾರನ್ನು ಉಡುಗೊರೆಯಾಗಿ ನೀಡಿತು.ಶುಕ್ರವಾರ ನಡೆದ ಸಮಾರಂಭದಲ್ಲಿ ಗಿರೀಶ್ ಅವರನ್ನು ಅಭಿನಂದಿಸಲಾಯಿತಲ್ಲದೆ, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕೆಲವು ಕ್ರೀಡಾಪಟುಗಳನ್ನೂ ಸನ್ಮಾನಿಸಲಾಯಿತು.ಯುವಕರಲ್ಲಿ  ಕ್ರೀಡೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹುಟ್ಟು ಪಡೆದಿರುವ ಮಲ್ಲೇಶ್ವರ ಸ್ಪೋರ್ಟ್ಸ್ ಪ್ರತಿಷ್ಠಾನಕ್ಕೆ ಉಪ ಮುಖ್ಯಮಂತ್ರಿ ಆರ್. ಅಶೋಕ ಚಾಲನೆ ನೀಡಿದರು.`ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಭಾಗವಹಿಸಿದ ಮತ್ತು ಪದಕ ಪಡೆದ ಎಲ್ಲ ಕ್ರೀಡಾಪಟುಗಳಿಗೆ ವೊಲ್ವೊ ಬಸ್‌ಗಳಲ್ಲಿ ರಾಜ್ಯದಾದ್ಯಂತ ಉಚಿತ ಪ್ರಯಾಣ ಮಾಡಲು ಅವಕಾಶವನ್ನು ಕಲ್ಪಿಸಲಾಗುವುದು~ ಎಂದೂ ಈ ಸಂದರ್ಭದಲ್ಲಿ ಆರ್.ಅಶೋಕ ಪ್ರಕಟಿಸಿದರು.ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಶಾಸಕ ಡಾ.ಸಿ.ಎನ್.ಅಶ್ವಥ್‌ನಾರಾಯಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಕ್ರೀಡಾಪಟುಗಳಾದ ಆನಂದ ಕುಮಾರ್, ಮಣಿಕಂಠ, ಅಶೋಕ ಕಶ್ಯಪ್, ಗೌತಮ್, ಪ್ರಮೀಳಾ ಅಯ್ಯಪ್ಪ, ಸಚಿನ್ ಬೆಳವಾಡಿ, ರವಿ ಮುಂತಾದವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry