ಗಿಲಾನಿ ಅಸಮಾಧಾನ

7

ಗಿಲಾನಿ ಅಸಮಾಧಾನ

Published:
Updated:

ಲಾಹೋರ್ (ಪಿಟಿಐ): ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ  ಮತ್ತು  ಮಾಜಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ನಡುವಿನ ಭಿನ್ನಾಭಿಪ್ರಾಯಗಳು ಈಗ ಬಹಿರಂಗಗೊಂಡಿವೆ. ಇದೇ ಮೊದಲ ಬಾರಿಗೆ ಪಿಪಿಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಿರುವ ಗಿಲಾನಿ, ತಮ್ಮ ಪುತ್ರನ  ಬಂಧನವನ್ನು ತಪ್ಪಿಸಲು ಸಾಧ್ಯವಾಗದೇ ಇರುವುದಕ್ಕೆ ಮತ್ತು ತಾವು ನೇಮಿಸಿದ್ದ ಅಧಿಕಾರಿಗಳನ್ನು ಬದಲಾಯಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಧ್ಯಕ್ಷ ಜರ್ದಾರಿ ವಿರುದ್ಧ ಸ್ವಿಟ್ಜರ್ಲೆಂಡ್‌ನಲ್ಲಿರುವ ಭ್ರಷ್ಟಾಚಾರ ಪ್ರಕರಣಗಳ ಪುನರ್‌ವಿಚಾರಣೆ ನಡೆಸುವ ಸಂಬಂಧ ಹೊರಡಿಸಿದ್ದ ಆದೇಶವನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ಸುಪ್ರೀಂಕೋರ್ಟ್ ಗಿಲಾನಿ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಿ ಸಂಸತ್ ಸದಸ್ಯತ್ವನ್ನು ಅನರ್ಹಗೊಳಿಸಿತ್ತು.

ತೀರ್ಪಿನ ಬಳಿಕ, ಪಿಪಿಪಿಯ ಮತ್ತೊಬ್ಬ ಮುಖಂಡ ರಜಾ ಪರ್ವೇಜ್ ಅಶ್ರಫ್ ಅವರನ್ನು ಪ್ರಧಾನಿಯನ್ನಾಗಿ ನೇಮಿಸಲಾಗಿತ್ತು.`ಸುಪ್ರೀಂ ಕೋರ್ಟ್ ಆವರಣದಲ್ಲಿ ನನ್ನ ಪುತ್ರ ಅಲಿ ಮುಸಾ ಬಂಧನವನ್ನು ತಪ್ಪಿಸಲು ಅಸಮರ್ಥವಾಗಿರುವ ಅಶ್ರಫ್  ನೇತೃತ್ವದ ಸರ್ಕಾರದ ಕಾರ್ಯವೈಖರಿ ನನಗೆ ಇಷ್ಟವಾಗಿಲ್ಲ. ನನ್ನ ಅಧಿಕಾರಿಗಳ ತಂಡದಲ್ಲಿ ಬದಲಾವಣೆ ಮಾಡಿರುವುದೂ ಅಸಮಾಧಾನ ತಂದಿದೆ~ ಎಂದು ಗಿಲಾನಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry