ಗಿಲಾನಿ ನ್ಯಾಯಾಂಗ ನಿಂದನೆ ಪ್ರಕರಣ:

7

ಗಿಲಾನಿ ನ್ಯಾಯಾಂಗ ನಿಂದನೆ ಪ್ರಕರಣ:

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಸುಪ್ರೀಂಕೋರ್ಟ್ ಬುಧವಾರ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 28ರವರೆಗೆ ಮುಂದೂಡಿದ್ದು, ಸಾಕ್ಷ್ಯಗಳನ್ನು ಅಂಗೀಕರಿಸಿ, ಪ್ರಾಸಿಕ್ಯೂಟರ್ ಹೇಳಿಕೆ ದಾಖಲಿಸಿದ ನಂತರ ಈ ಕ್ರಮ ಕೈಗೊಂಡಿದೆ.ನ್ಯಾಯಮೂರ್ತಿ ನಾಸೆರ್ ಉಲ್ ಮುಲ್ಕ್ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಗಿಲಾನಿಯವರ ವಿರುದ್ಧದ ವಿಚಾರಣಾ ಕಲಾಪಗಳಲ್ಲಿ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಟಾರ್ನಿ ಜನರಲ್ ಅನ್ವರ್ ಉಲ್ ಹಕ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು.ಜರ್ದಾರಿ ಅವರಿಗೆ ಲಾಭ ಮಾಡಿಕೊಟ್ಟಿರುವ ಭ್ರಷ್ಟಾಚಾರ ಆರೋಪಗಳ ಕ್ಷಮಾದಾನ ಕಾಯ್ದೆಯನ್ನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವನ್ನು ಜಾರಿಗೊಳಿಸಲು ವಿಫಲವಾಗಿರುವ ಪ್ರಕರಣ ಸೇರಿದಂತೆ ಗಿಲಾನಿ ವಿರುದ್ಧದ ಹಲವು ಸಾಕ್ಷ್ಯಗಳನ್ನು ಹಕ್ ನ್ಯಾಯಪೀಠಕ್ಕೆ ಸಲ್ಲಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry