ಗಿಲಾನಿ ಸ್ಥಾನಕ್ಕೆ ಕುತ್ತು ಸಂಭವ: ಕೋರ್ಟ್

7

ಗಿಲಾನಿ ಸ್ಥಾನಕ್ಕೆ ಕುತ್ತು ಸಂಭವ: ಕೋರ್ಟ್

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್):  ನ್ಯಾಯಾಂಗ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದ ಪಾಕಿಸ್ತಾನದ ಪ್ರಧಾನಮಂತ್ರಿ ಯೂಸುಫ್ ರಜಾ ಗಿಲಾನಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಐದು ವರ್ಷಗಳವರೆಗೆ ಅನರ್ಹಗೊಳಿಸುವ ಸಾಧ್ಯತೆ ಇದೆ ಎಂದು ದೇಶದ ಸುಪ್ರೀಂಕೋರ್ಟ್ ಮಂಗಳವಾರ ತೀರ್ಪು ನೀಡಿದೆ.ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ವಿರುದ್ಧದ ತನಿಖೆ ಕೈಗೊಳ್ಳಲು ಕೋರ್ಟ್ ನೀಡಿದ ತೀರ್ಪನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗಿದ್ದು ಇದೀಗ ಕೋರ್ಟ್ 77 ಪುಟಗಳ ವಿವರವಾದ ತೀರ್ಪು ನೀಡಿದೆ. ಕಳೆದ ಏಪ್ರಿಲ್ 26 ರಂದು ನ್ಯಾಯಾಂಗ ನಿಂದನೆ ಆರೋಪದಡಿ ಕೋರ್ಟ್ ಗಿಲಾನಿಗೆ ಕೇವಲ ಒಂದು ನಿಮಿಷದ ಕಾರಾಗೃಹ ಶಿಕ್ಷೆ ವಿಧಿಸಿ ಸಂಕ್ಷಿಪ್ತವಾಗಿ ತೀರ್ಪು ನೀಡಿತ್ತು.ಈ ನಡುವೆ ಐದು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ಗಿಲಾನಿ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಂಸತ್ತಿನ ಸ್ಪೀಕರ್ ಮಾತ್ರ ತಮ್ಮನ್ನು ಅನರ್ಹಗೊಳಿಸುವ ಅಧಿಕಾರ ಹೊಂದಿದ್ದು ರಾಜೀನಾಮೆ ನೀಡುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ಇಟ್ಟಿರುವ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry