ಗೀತಾಂಜಲಿ

7

ಗೀತಾಂಜಲಿ

Published:
Updated:

ಕೋಲ್ಕತ್ತ (ಐಎಎನ್‌ಎಸ್): ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯ ವಿಶೇಷ ಸಂಚಿಕೆಯನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶನಿವಾರ ಇಲ್ಲಿ ಬಿಡುಗಡೆ ಮಾಡಿದರು.ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರಂಥಾಲಯದ ಸ್ವಾಮ್ಯದಲ್ಲಿರುವ ರವೀಂದ್ರರು ಸ್ವತಃ ಇಂಗ್ಲಿಷ್‌ಗೆ ಅನುವಾದಿಸಿದ ಕವನಗಳ ಹಸ್ತಪ್ರತಿಯ ಪಡಿಯಚ್ಚು ಇದಾಗಿದೆ. ಹಾರ್ವರ್ಡ್ ವಿ.ವಿ. ಇದರ ಕೃತಿಸ್ವಾಮ್ಯ ಹಕ್ಕು ಹೊಂದಿದ್ದು ಈ ಪ್ರತಿಗಳ ಮಾರಾಟಕ್ಕೆ ಅವಕಾಶವಿಲ್ಲ. ಆದರೆ ಟ್ಯಾಗೂರರ 150ನೇ ವರ್ಷಾಚರಣೆ ಹಾಗೂ ಗೀತಾಂಜಲಿ ರಚನೆಯಾಗಿ 100 ವರ್ಷ ಸಂದ ಸಂದರ್ಭದಲ್ಲಿ ಅದರ ಪಡಿಯಚ್ಚು ಪಡಿಯಲು ವಿವಿ ಅನುವು ಮಾಡಿಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry