ಭಾನುವಾರ, ಏಪ್ರಿಲ್ 18, 2021
33 °C

ಗೀತಾಂಜಲಿ ಸಮೂಹದ ಬೇಟಿ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಗೀತಾಂಜಲಿ ಆಭರಣ ಸಂಸ್ಥೆ ಹಾಗೂ ಭಾರತೀಯ ಟೆಲಿವಿಷನ್ ಅಕಾಡೆಮಿ ಜೊತೆಗೂಡಿ `ಬೇಟಿ~ ಯೋಜನೆಯನ್ನು ಆರಂಭಿಸಿದೆ.2006ರಲ್ಲಿ ಆರಂಭವಾದ ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಮಹಿಳಾ ಸಾಕ್ಷರತೆಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಬಾಲಿವುಡ್ ತಾರೆಯರಾದ ಐಶ್ವರ್ಯಾ ರೈ, ಅಮೀರ್‌ಖಾನ್, ಪ್ರೀತಿ ಜಿಂಟಾ ಹಾಗೂ ಕ್ರಿಕೆಟ್ ಪಟು ಶ್ರೀಶಾಂತ್ ಸಹ ಕೈಗೂಡಿಸಿದ್ದಾರೆ. ಜಾರ್ಖಂಡ್‌ನಲ್ಲಿ ಈಚೆಗೆ ಆ್ಯಸಿಡ್ ದಾಳಿಗೆ ಒಳಗಾಗಿರುವ ಸೋನಾಲಿ ಮುಖರ್ಜಿಯ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.ಇಂಡಿಯನ್ ಇಂಟರ್‌ನ್ಯಾಶನಲ್ ಜ್ಯುವೆಲ್ಲರಿ ವೀಕ್(ಐಐಜೆಡಬ್ಲ್ಯು) ಅನ್ನು  ಸೋನಾಲಿ ಮುಖರ್ಜಿ ಸಹಾಯಾರ್ಥ ವೇದಿಕೆಯಂತೆ ಬಳಸಲಾಗುವುದು ಎಂದು ಗೀತಾಂಜಲಿ ಸಮೂಹದ ಸಿಎಂಡಿ ಮೆಹುಲ್ ಚೋಕ್ಸಿ ತಿಳಿಸಿದ್ದಾರೆ.ಸದ್ಯ 22.5 ಲಕ್ಷ ರೂಪಾಯಿ ಅಗತ್ಯವಿದೆ. ಅದರಲ್ಲಿ ನವದೆಹಲಿಯ ವೈದ್ಯಕೀಯ ತಂಡಕ್ಕೆ 13 ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಅಧ್ಯಕ್ಷೆ  ಅನು ರಂಜನ್ ತಿಳಿಸಿದ್ದಾರೆ.`ಬೇಟಿ~ ಯೋಜನೆಯ ಮೂಲಕ ವಸ್ತ್ರ ವಿನ್ಯಾಸಕರು ಬಾಲಿವುಡ್ ತಾರೆಯರು ಐಐಜೆಡಬ್ಲ್ಯುನಲ್ಲಿ ದೇಣಿಗೆ ಸಂಗ್ರಹಿಸಲು ಶೋ ಸಹ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅನುಷ್ಕಾ ರಂಜನ್ `ಬೇಟಿ~ಯ ಉದ್ದೇಶಗಳನ್ನು ಬೆಳಕಿಗೆ ತರುವ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಎಂದೂ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.