ಗೀತಿಕಾ ಆತ್ಮಹತ್ಯೆ: ಚಡ್ಡಾ ಅರ್ಜಿ ವಜಾ

7

ಗೀತಿಕಾ ಆತ್ಮಹತ್ಯೆ: ಚಡ್ಡಾ ಅರ್ಜಿ ವಜಾ

Published:
Updated:

ನವದೆಹಲಿ (ಪಿಟಿಐ): ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ಆರೋಪಿ ಅರುಣಾ ಚಡ್ಡಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

`ಪ್ರಕರಣಕ್ಕೆ ಸಂಬಂಧಿಸಿ ವಿಸ್ತೃತ ಆದೇಶವನ್ನು ಬಳಿಕ ಹೊರಡಿಸಲಾಗುವುದು'ಎಂದು ನ್ಯಾಯಮೂರ್ತಿ ಪ್ರತಿಭಾ ರಾಣಿ ಹೇಳಿದರು.

ಗೀತಿಕಾ ನೌಕರಿಯಲ್ಲಿದ್ದ ಎಂಡಿಎಲ್‌ಆರ್ ಏರ್‌ಲೈನ್ಸ್‌ನಲ್ಲಿಯೇ ಚಡ್ಡಾ ಕೂಡ ಕಾರ್ಯ ನಿರ್ವಹಿಸುತ್ತಿದ್ದರು. ಆ. 8ರಂದು ಅವರನ್ನು ಬಂಧಿಸಲಾಗಿತ್ತು.

ಅಕ್ಟೋಬರ್ 15ರಂದು ಅರುಣಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ಏರ್‌ಲೈನ್ಸ್ ಮಾಲಿಕರಾಗಿದ್ದ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಆದರೆ ಗೀತಿಕಾ ಆತ್ಮಹತ್ಯೆಯಲ್ಲಿ ತಾವು ಶಾಮೀಲಾಗಿರುವುದನ್ನು ನ್ಯಾಯಾಂಗ ಬಂಧನದಲ್ಲಿರುವ ಕಾಂಡಾ ಹಾಗೂ ಚಡ್ಡಾ ತಳ್ಳಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry