ಗುಂಡಿಕ್ಕಿ ಹಿಂದೂ ವೈದ್ಯನ ಹತ್ಯೆ

7

ಗುಂಡಿಕ್ಕಿ ಹಿಂದೂ ವೈದ್ಯನ ಹತ್ಯೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಹಿಂದೂ ಧರ್ಮಕ್ಕೆ ಸೇರಿದ ಖ್ಯಾತ ವೈದ್ಯರೊಬ್ಬರನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಲಕ್ಷ್ಮಿ ಚಾಂದ್ ಹತ್ಯೆಗೊಳಗಾದವರು. ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಚಾಂದ್ ಅವರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಮಸ್ತುಂಗ್ ನಗರದ ಬಳಿ ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.ಬಲೂಚಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಇಲ್ಲಿನ ತೀವ್ರಗಾಮಿಗಳು ಕೆಲ ತಿಂಗಳುಗಳಿಂದ ಈ ರೀತಿಯ ದಾಳಿ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry