ಗುಂಡಿನ ಚಕಮಕಿ, 6 ನಕ್ಸಲರ ಹತ್ಯೆ

ಶನಿವಾರ, ಜೂಲೈ 20, 2019
23 °C

ಗುಂಡಿನ ಚಕಮಕಿ, 6 ನಕ್ಸಲರ ಹತ್ಯೆ

Published:
Updated:

ನಾಗಪುರ (ಪಿಟಿಐ): ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಈಟಾಪಲ್ಲಿ ಬಳಿ ಭಾನುವಾರ ನಕ್ಸಲ್ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ.ನಕ್ಸಲರ ವಿರುದ್ಧದ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಇವರೆಗೆ ಸಮವಸ್ತ್ರ ಧರಿಸಿರುವ ಆರು ನಕ್ಸಲ್‌ರ ಶವಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಗುಂಡಿನ ಚಕುಮಕಿ ನಡೆದ ಸ್ಥಳದಿಂದ ಒಂದು ಬಂದೂಕು, ಮೂರು ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ನಕ್ಸಲರ ಗುಂಪೊಂದು ಗಡ್‌ಚಿರೋಲಿಯಲ್ಲಿರುವ ಜಿಲ್ಲಾ ಪೊಲೀಸ್‌ನ `ಸಿ-60' ಬೆಟಾಲಿಯನ್‌ನ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ವೇಳೆ  ಈ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry