ಗುಂಡಿನ ಚಕಮಕಿ: 9 ನಕ್ಸಲರ ಬಲಿ

7

ಗುಂಡಿನ ಚಕಮಕಿ: 9 ನಕ್ಸಲರ ಬಲಿ

Published:
Updated:
ಗುಂಡಿನ ಚಕಮಕಿ: 9 ನಕ್ಸಲರ ಬಲಿ

ರಾಂಚಿ (ಐಎಎನ್‌ಎಸ್): ಜಾರ್ಖಂಡ್‌ನ ಲಾಟೆಹಾರ್ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಒಂಬತ್ತು ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ.

ಜಿಲ್ಲೆಯ ಬಾರ್ವಡಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಗುರುವಾರ ಮಾಹಿತಿ ಲಭ್ಯವಾಗಿತ್ತು. ಭದ್ರತಾ ಪಡೆಗಳು ತಕ್ಷಣ ಅರಣ್ಯವನ್ನು ಸುತ್ತುವರೆದರು. ನಂತರ ಶರಣಾಗುವಂತೆ ನಕ್ಸಲರಿಗೆ ಸೂಚಿಸಲಾಯಿತು. ಆದರೆ ನಕ್ಸಲರು ಭದ್ರತಾ ಪಡೆಗಳತ್ತ ಗುಂಡು ಹಾರಿಸಲು ಆರಂಭಿಸಿದರು. ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದರು ಎಂದು ಎಸ್ಪಿ ಕುಲದೀಪ್ ದ್ವಿವೇದಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಶುಕ್ರವಾರ ಬೆಳಗಿನವರೆಗೆ ಗುಂಡಿನ ಚಕಮಕಿ ಮುಂದುವರೆದಿತ್ತು. ಇದುವರೆಗೆ ಒಂಬತ್ತು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಜತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶ ಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ ಎಂದೂ ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry