ಗುಂಡಿನ ದಾಳಿಗೆ ನಾಲ್ವರ ಸಾವು

7

ಗುಂಡಿನ ದಾಳಿಗೆ ನಾಲ್ವರ ಸಾವು

Published:
Updated:

ನ್ಯೂಯಾರ್ಕ್ (ಎಎಫ್‌ಪಿ): ಪೆನ್ಸಿಲ್ವೇನಿಯಾದ ಗ್ರಾಮೀಣ ಭಾಗದಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.ಕನೆಕ್ಟಿಕಟ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಇನ್ನೂ ಹಸಿಯಾಗಿರುವಾಗಲೇ ಈ ದುರ್ಘಟನೆ ನಡೆದಿದೆ.

ಅಮೆರಿಕದ ಪೂರ್ವಕ್ಕೆ ಇರುವ ಅತ್ಯಂತ ಒಳ ಪ್ರದೇಶವಾದ ಗೀಸೆಟೌನ್‌ನಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಬ್ಲೇರ್ ಕೌಂಟಿಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯ ವಕ್ತಾರೆ, ಡಯಾನೆ ಮಿಲಿಂಗ್ ಹೇಳಿದ್ದಾರೆ.ದಾಳಿ ನಡೆಸಿದ ಆರೋಪಿಯೂ ಘಟನೆಯಲ್ಲಿ ಮೃತಪಟ್ಟಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry