ಗುಂಡಿನ ದಾಳಿ: ಯೋಧನಿಗೆ ಗಾಯ

7

ಗುಂಡಿನ ದಾಳಿ: ಯೋಧನಿಗೆ ಗಾಯ

Published:
Updated:

ಜಮ್ಮು (ಪಿಟಿಐ): ಗಡಿ ನಿಯಂತ್ರಣ  ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಸೋಮವಾರ ರಾತ್ರಿ ಭಾರತದ ಮೂರು ಕಾವಲು ಚೌಕಿಗಳ ಮೇಲೆ ಪ್ರಚೋದನಕಾರಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಬಿಎಸ್‌ಎಫ್ ಯೋಧನೊಬ್ಬ ಗಾಯಗೊಂಡಿದ್ದಾನೆ.ಅಬು ಮೊಹಮ್ಮದ್ ಸಿದ್ಧಿಕಿ, ಪಾಕ್ ಪಡೆಗಳ ಗುಂಡಿನ ದಾಳಿಯಲ್ಲಿ ಗಾಯಗೊಂಡ ಯೋಧ.‘ಪೂಂಚ್ ಜಿಲ್ಲೆಯ ಮೆಂದಾರ ಉಪವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು ಸೋಮವಾರ ಮಧ್ಯರಾತ್ರಿ,

ಭಾರಿ ಸ್ವಯಂಚಾಲಿಕ ಬಂದೂಕು ಮತ್ತು ರಾಕೆಟ್ ನಿರ್ದೇಶಿತ ಗ್ರೆನೇಡ್ ದಾಳಿ ನಡೆಸಿದವು. ಇದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡಿತು’ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಜನವರಿಯಿಂದ ಪಾಕ್ ಗಡಿಯಲ್ಲಿ 90ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry