ಗುಂಡಿನ ದಾಳಿ: 8 ಮಂದಿ ಸಾವು

7

ಗುಂಡಿನ ದಾಳಿ: 8 ಮಂದಿ ಸಾವು

Published:
Updated:

ಸೀಲ್ ಬೀಚ್ (ಯುಎಸ್) (ಎಪಿ): ಸಾಮಾನ್ಯವಾಗಿ ಶಾಂತವಾಗಿರುವ ಕ್ಯಾಲಿಫೋರ್ನಿಯಾ ಬೀಚ್‌ನಲ್ಲಿ ಹೆಚ್ಚು ಜನರಿದ್ದ ಕೇಶಾಲಂಕಾರ ಮಳಿಗೆಯೊಂದರಲ್ಲಿ ಶಸ್ತ್ರಧಾರಿಯೊಬ್ಬ ಗುಂಡಿನ ಸುರಿಮಳೆಗೈದಿದ್ದು ಎಂಟು ಮಂದಿ ಮೃತಪಟ್ಟು ಒಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.

ಈತ ಸಲೂನ್ ಮೆರಿಟೇಜ್‌ನಿಂದ ಮಧ್ಯಾಹ್ನ 1.30 ಹೊತ್ತಿಗೆ ಗುಂಡಿನ ದಾಳಿ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗಿದ್ದಾನೆ. ಇಲ್ಲಿಂದ ಅರ್ಧ ಮೈಲಿ ದೂರದಲ್ಲಿ ಈತನನ್ನು ಅಧಿಕಾರಿಗಳು ತಡೆದಿದ್ದು ಆತ ಶರಣಾಗಿದ್ದಾನೆ ಎಂದು ಪೊಲೀಸ್ ಸಾರ್ಜೆಂಟ್ ಸ್ಟೀವ್ ಬೌಲ್ಸ್ ಹೇಳಿದ್ದಾರೆ.

ಆತನ ಹೆಸರನ್ನು ತಕ್ಷಣ ಪ್ರಕಟಿಸಿಲ್ಲ. ಕೊಲೆಗೆ ಕಾರಣ ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಮೃತಪಟ್ಟವರ ದೇಹ ಸಲೂನ್‌ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಬೌಲ್ಸ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry