ಶುಕ್ರವಾರ, ಜೂನ್ 18, 2021
25 °C

ಗುಂಡು ಹಾರಿಸಿ ಚಿನ್ನ, ಬೆಳ್ಳಿ ವ್ಯಾಪಾರಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ:  ತಾಲ್ಲೂಕಿನ ನುಗ್ಗೇ­ಹಳ್ಳಿ ಹೋಬಳಿ ಕೇಂದ್ರದಲ್ಲಿ ಚಿನ್ನ, ಬೆಳ್ಳಿ ವ್ಯಾಪಾರಿ­ಯೊಬ್ಬ­ರನ್ನು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಸೋಮ­ವಾರ ಸಂಜೆ ನಡೆದಿದೆ. ನುಗ್ಗೇಹಳ್ಳಿ ಗ್ರಾಮದ ಬಾಗೂರು ರಸ್ತೆ­ಯಲ್ಲಿ­ರುವ ಕಾಳಿಕಾಂಬ ಜ್ಯುವೆ­ಲರ್ಸ್‌ ಮಾಲೀಕ  ಪರಮೇಶ್‌ (35) ಕೊಲೆಯಾದವರು.ಎಂದಿನಂತೆ ಪರಮೇಶ್‌ ಸಂಜೆ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕಿ, ಹಾಸನಕ್ಕೆ ತೆರಳಲು ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿ­ನಲ್ಲಿ ಬಂದ ಇಬ್ಬರು ಮುಸುಕು­ಧಾರಿಗಳು ಏಕಾಏಕಿ ಅವ­ರತ್ತ ಎರಡು ಸಲ ಗುಂಡು ಹಾರಿಸಿದರು. ಪರ­ಮೇಶ್‌ ನೆಲಕ್ಕೆ ಕುಸಿದುಬಿದ್ದರು. ಈ ಸಂದರ್ಭ­ದಲ್ಲಿ ವಿದ್ಯುತ್‌ ಪೂರೈಕೆ ಇರಲಿಲ್ಲ. ಮುಸುಕು­ಧಾರಿಗಳು ಬೈಕಿ­ನಲ್ಲಿ ಚನ್ನರಾಯಪಟ್ಟಣದತ್ತ ಪರಾರಿ­ಯಾದರು.ರಕ್ತದ ಮಡುವಿನಲ್ಲಿ ಬಿದ್ದಿದ್ದ ಪರ­ಮೇಶ್‌ ಅವರನ್ನು ಪೊಲೀಸ್‌ ವಾಹನ­ದಲ್ಲಿ ಚನ್ನರಾಯಪಟ್ಟಣಕ್ಕೆ ಆಸ್ಪ­ತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ದಾರಿ ಮಧ್ಯೆ ಆಂಬು­ಲೆನ್ಸ್‌ ಬಂತು. ಅದರಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಪರಮೇಶ್‌ ಅಸು ನೀಗಿದರು.ಸ್ಥಳದಲ್ಲಿ ಒಂದು ಬ್ಯಾಗ್‌ ದೊರಕಿದ್ದು ಅದರಲ್ಲಿ ಪರಮೇಶ್‌ಗೆ ಸಂಬಂಧಿಸಿದ ವಸ್ತುಗಳಿವೆ. ಕೊಲೆಗೆ ಕಾರಣ ಗೊತ್ತಾಗಿಲ್ಲ ಎಂದು  ತಿಳಿಸಿದರು. ಆದರೆ, ದುಷ್ಕರ್ಮಿಗಳು  ಪರ­ಮೇಶ್‌ ಮೇಲೆ ಗುಂಡು ಹಾರಿಸಿ ಅವರ ಬಳಿ ಇದ್ದ ಚಿನ್ನಾಭರಣದ ಬ್ಯಾಗ್ ಕಿತ್ತು­ಕೊಂಡು ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ  ಸ್ಥಳೀಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.