ಗುಂಡು ಹಾರಿಸಿ ವ್ಯಕ್ತಿ ಪರಾರಿ

7

ಗುಂಡು ಹಾರಿಸಿ ವ್ಯಕ್ತಿ ಪರಾರಿ

Published:
Updated:

ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ನೆಲಕ್ಕೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಅಮೃತಹಳ್ಳಿ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಕಾಲೋನಿಯ ಈಶ್ವರ ದೇವಾಲಯದ ಬಳಿ ಸೋಮವಾರ ರಾತ್ರಿ ಸುಮಾರು 10.30 ರ ಸಮಯದಲ್ಲಿ ಕ್ವಾಲಿಸ್ ಕಾರಿನಲ್ಲಿ ಬಂದಿರುವ ಅಪರಿಚಿತ ವ್ಯಕ್ತಿ ಕಾರಿನಿಂದ ಇಳಿದು ಕೂಗಾಡಿ, ನೆಲಕ್ಕೆ ಮೂರು ಸುತ್ತು ಗುಂಡು ಹಾರಿಸಿ ಬಂದ ಕಾರಿನಲ್ಲಿಯೇ ಪರಾರಿಯಾಗಿದ್ದಾನೆ. ಪಾಯಿಂಟ್ 22 ಪಿಸ್ತೂಲಿನಿಂದ ಗುಂಡು ಹಾರಿಸಲಾಗಿದ್ದು, ಕಾರಣ ತಿಳಿದು ಬಂದಿಲ್ಲ.ಪ್ರತ್ಯಕ್ಷದರ್ಶಿಗಳ ಪ್ರಕಾರ ಆತ ಕುಡಿದಿದ್ದ ಎಂದು ತಿಳಿದುಬಂದಿದೆ. ಸ್ಥಳ ಪರಿಶೀಲನೆ ನಡೆಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಲಯ ಡಿಸಿಪಿ ರವಿಕಾಂತೇಗೌಡ  `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry