ಗುಂಡ್ಲುಪೇಟೆ ತಾ.ಪಂ.ಗೆ ಮಹಿಳಾ ಸಾರಥ್ಯ

7

ಗುಂಡ್ಲುಪೇಟೆ ತಾ.ಪಂ.ಗೆ ಮಹಿಳಾ ಸಾರಥ್ಯ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ  ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷೆ ಗಾಯಿತ್ರಿನಾಗೇಶ್ ಗುರುವಾರ ಹೇಳಿದರು.ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.ತಲಾ 10 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಕಬ್ಬಹಳ್ಳಿ ಕ್ಷೇತ್ರದ ಗಾಯಿತ್ರಿನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಕಗ್ಗಳ ಕ್ಷೇತ್ರದ ವೆಂಕಟಸುಬ್ಬಮ್ಮ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು.ಚುನಾವಣಾಧಿಕಾರಿಯಾಗಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಸವರಾಜು ಕಾರ್ಯ ನಿರ್ವಹಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಸಾದ್, ವ್ಯವಸ್ಥಾಪಕ ಶಿವರುದ್ರ ನಾಯಕ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ಮುನಿರಾಜು,  ಸದಸ್ಯರುಗಳಾದ ಪ್ರೇಮ, ಮಲ್ಲಿದಾಸ್, ಸಿ. ಮಹದೇವಪ್ರಸಾದ್, ಸರಸ್ವ ತಮ್ಮ, ಮಲ್ಲಮ್ಮ, ನಾಗಮಲ್ಲಪ್ಪ, ನಾಗರಾಜು, ಪುಟ್ಟಮಾದಮ್ಮ, ಜಯರಾಂ, ಶಾರದಮ್ಮ ಮುಂತಾದರವರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry