ಬುಧವಾರ, ಜೂನ್ 16, 2021
22 °C

ಗುಂಡ್ಲುಪೇಟೆ: ಸಮಸ್ಯೆಗೆ ಪರಿಹಾರ ಮರೀಚಿಕೆ

ಪ್ರಜಾವಾಣಿ ವಾರ್ತೆ/ ಎನ್. ನಾಗರಾಜು Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೊಳವೆ ಬಾವಿಗಳೇ ನೀರಿಗೆ ಆಶ್ರಯವಾಗಿವೆ. ಹೀಗಾಗಿ, ವಿದ್ಯುತ್ ಕೊರತೆಯಿಂದ ನೀರಿಗೆ ತೊಂದರೆ ಪಡುವಂತಾಗಿದೆ.ಮಲ್ಲಯ್ಯನಪುರ, ರಂಗನಾಥಪುರ, ಕೂತನೂರು, ಅಣ್ಣೂರು ಗ್ರಾಮದಲ್ಲಿ ತೊಂಬೆ ನಿರ್ಮಿಸಿದ್ದರೂ ನೀರು ಪೂರೈಕೆಗೆ ಚಾಲನೆ ಸಿಕ್ಕಿಲ್ಲ. ಇದರ ಪರಿಣಾಮ ಮಹಿಳೆಯರು ಕುಡಿಯುವ ನೀರು ತರಲು ಅಕ್ಕಪಕ್ಕದ ಜಮೀನಿನ ಕೃಷಿ ಪಂಪ್‌ಸೆಟ್‌ಗಳನ್ನೇ ಅವಲಂಬಿಸಿದ್ದಾರೆ. ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.ಈ ಗ್ರಾಮಕ್ಕೆ ಕಬಿನಿ ನದಿಯಿಂದ ಕುಡಿಯುವ ನೀರು ಪೂರೈಸಲು ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಈ ಟ್ಯಾಂಕ್ ಶಿಥಿಲಗೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ನಿರ್ಮಿಸು ತ್ತಿರುವ ಟ್ಯಾಂಕ್ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ ಎಂದು ದೂರುತ್ತಾರೆ ತಾ.ಪಂ. ಸದಸ್ಯ ಮಲ್ಲಿದಾಸ್.ಹಂಗಳ ಗ್ರಾಮಕ್ಕೆ ನದಿಯಿಂದ ನೀರು ಪೂರೈಕೆ ಇಲ್ಲ. ಹೀಗಾಗಿ, ಸಮಸ್ಯೆ ಉಲ್ಬಣಿಸಿದೆ. ಗ್ರಾಮದಲ್ಲಿ ಹಲವು ದಶಕದಿಂದ ಸಮಸ್ಯೆ ಇದ್ದರೂ ಪರಿಹಾರ ಕಂಡಿಲ್ಲ ಎಂಬುದು ಗ್ರಾಮಸ್ಥರ ದೂರು.ರೂ 2 ಕೋಟಿ ಕ್ರಿಯಾಯೋಜನೆ

ತಾಲ್ಲೂಕಿನ ವಿವಿಧ ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 2 ಕೋಟಿ ರೂ ವೆಚ್ಚದಡಿ ಕ್ರಿಯಾಯೋಜನೆ ತಯಾರಿಸಲಾಗಿದೆ. 85 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಹಾಲಿ ಇರುವ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಹೊಸದಾಗಿ 48 ಕೊಳವೆಬಾವಿ ಕೊರೆಯಿಸಲು ನಿರ್ಧರಿಸಲಾಗಿದೆ.`ಅಣ್ಣೂರುಕೇರಿ, ಕುನಗಳ್ಳಿ ಕಾಲೊನಿ, ಕೋಡಹಳ್ಳಿ, ರಂಗನಾಥಪುರ, ಕೊಡಗಾಪುರ, ಭೀಮನಬೀಡು ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಕೂಡಲೇ, ಪರಿಹಾರಕ್ಕೆ ಕ್ರಮಕೈಗೊಳ್ಳ ಲಾಗುವುದು~ ಎಂದು ಜಿ.ಪಂ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಸಾರಥಿ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.