ಗುಂಪು ಘರ್ಷಣೆ: 14 ಮಂದಿ ಬಂಧನ

7
ಪರಿಸ್ಥಿತಿ ನಿಯಂತ್ರಣದಲ್ಲಿದೆ: ಎಸ್‌ಪಿ ಚಂದ್ರಗುಪ್ತ

ಗುಂಪು ಘರ್ಷಣೆ: 14 ಮಂದಿ ಬಂಧನ

Published:
Updated:

ಬೆಳಗಾವಿ: ‘ಗಣೇಶ ಹಬ್ಬದ ಬ್ಯಾನರ್ ಕಟ್ಟುವ ಕುರಿತು ಅನಗೋಳದ ರಾಜ ಹಂಸಗಲ್ಲಿಯಲ್ಲಿ ಭಾನುವಾರ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ 14 ಮಂದಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣ ದಲ್ಲಿದ್ದು, ಗಣೇಶ ಉತ್ಸವ ಶಾಂತಿಯುತ ನಡೆಯುವಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಘರ್ಷಣೆ ಯಲ್ಲಿ ಗಾಯಗೊಂಡವರು ಚೇತರಿಸಿ ಕೊಳ್ಳುತ್ತಿದ್ದಾರೆ. ನಗರದ ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ಬಂದೋಬಸ್ತ್‌ ಮಾಡಲಾಗಿದೆ. ಯಾವುದೇ ವದಂತಿಗಳಿಗೆ, ಊಹಾಪೋಹಗಳಿಗೆ ಜನರು ಕಿವಿಗೊಡಬಾರದು ಎಂದು ವಿನಂತಿಸಿದರು.ಸೋಮವಾರ ಗಣೇಶ ಮೂರ್ತಿ ಗಳನು್ನ  ಪ್ರತಿಷ್ಠಾಪನೆಗೆ ಕರೆದು ಕೊಂಡುವ ಹೋಗುವ ಮೆರವಣಿ ಗೆಯು ಶಾಂತರೀತಿಯಿಂದ ನಡೆದಿದೆ. ಯಾವುದೇ ಸಣ್ಣ ಘಟನೆಗೂ ಆಸ್ಪದ ನೀಡಿಲ್ಲ ಎಂದ ಅವರು, ತಮ್ಮ ಇಲಾಖೆ ಯಿಂದ ನಗರದ ವಿವಿಧ ವೃತ್ತದಲ್ಲಿ 20 ಸಿಸಿ ಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿ ಯಾಗಿ 10 ಸಿಸಿ ಟಿವಿ ಕೆಮರಾಗಳನ್ನು ಅಳವಡಿಸಲಾಗುವುದು. ಗಣೇಶೋತ್ಸವ ಮಹಾಮಂಡಳಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಗಿತ್ತು, ಆದರೆ, ಯಾವುದೇ ಮಂಡಳಗಳು ಕ್ಯಾಮೆರಾ ಅಳವಡಿಸಿಲ್ಲ ಎಂದರು.ಹೆಚ್ಚಿನ ಭದ್ರತೆಗಾಗಿ ಆರ್‌ಎಎಫ್‌ನ ಒಂದು ಕಂಪೆನಿ ಬರಲಿದೆ. 14 ಕೆಎಸ್‌ಆರ್‌ಪಿ, 18 ಡಿಎಆರ್‌ ತುಕಡಿಗಳು, 1000 ಪೊಲೀಸ್‌ ಸಿಬ್ಬಂದಿ, 25 ಅಧಿಕಾರಿಗಳು ಹಾಗೂ 700 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry