ಗುಜರಾತ್‌ನಲ್ಲಿ ಚುನಾವಣೆ

7

ಗುಜರಾತ್‌ನಲ್ಲಿ ಚುನಾವಣೆ

Published:
Updated:

ನವದೆಹಲಿ (ಪಿಟಿಐ): ಸತತ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ ನರೇಂದ್ರ ಮೋದಿ ಅವರ ಭವಿಷ್ಯ ನಿರ್ಧರಿಸಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಲಾಗಿದೆ.ಮುಂದಿನ ಜನವರಿಯಲ್ಲಿ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ಹಿಮಾಚಲ ಪ್ರದೇಶದ ವಿಧಾನಸಭೆಗೂ ಚುನಾವಣಾ ದಿನಾಂಕ ನಿಗದಿಪಡಿಸಲಾಗಿದೆ.ಗುಜರಾತ್‌ನ ಒಟ್ಟು 182 ವಿಧಾನಸಭಾ ಸ್ಥಾನಗಳಿಗೆ ಡಿಸೆಂಬರ್ 13 ಮತ್ತು 17 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.ಹಿಮಾಚಲ ಪ್ರದೇಶದ  ಒಟ್ಟು 68 ಸ್ಥಾನಗಳಿಗೆ ನವೆಂಬರ್ 4ರಂದು ಚುನಾವಣೆ ನಡೆಯಲಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ವಿ. ಎಸ್. ಸಂಪತ್ ಬುಧವಾರ ಘೋಷಿಸಿದ್ದಾರೆ.`ಎರಡೂ ರಾಜ್ಯಗಳ ಮತ ಎಣಿಕೆ ಡಿ. 20ರಂದು ನಡೆಯಲಿದೆ. ಗುಜರಾತ್ ವಿಧಾನಸಭಾ ಚುನಾವಣೆಗಾಗಿ ನವೆಂಬರ್ 17ರಂದು ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗಾಗಿ ಇದೇ 10ರಂದು ಅಧಿಸೂಚನೆ ಹೊರಡಿಸಲಾಗುವುದು~ ಎಂದರು.`ದಿನಾಂಕ ಘೋಷಣೆಯಾದ ದಿನದಿಂದಲೇ ಚುನಾವಣಾ ನೀತಿ ಸಂಹಿತೆಗಳು ಜಾರಿಗೆ ಬರಲಿದ್ದು, ಚುನಾವಣೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಆಯೋಗ ಸೂಕ್ಷ್ಮವಾಗಿ ಪರಿಶೀಲಿಸಲಿದೆ~ಎಂದು ತಿಳಿಸಿದರು.

ಅಂತಿಮ ದಿನಾಂಕ: ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನವೆಂಬರ್ 24 ಹಾಗೂ ಎರಡನೇ ಹಂತಕ್ಕೆ ನವೆಂಬರ್ 30 ಕೊನೆಯ ದಿನಾಂಕವಾಗಿದೆ. ನಾಮಪತ್ರ ಹಿಂತೆಗೆತಕ್ಕೆ ನ. 28 ಹಾಗೂ ಡಿ. 3 ಕೊನೆಯ ದಿನವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry