ಗುಜರಾತ್‌ನಲ್ಲಿ ಬಿಜೆಪಿ : ವಿಜಯೋತ್ಸವ

7

ಗುಜರಾತ್‌ನಲ್ಲಿ ಬಿಜೆಪಿ : ವಿಜಯೋತ್ಸವ

Published:
Updated:

 


ಬೀದರ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ವಿಜಯೋತ್ಸವ ಆಚರಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಗಂದಗೆ, ಉಪಾಧ್ಯಕ್ಷ ರೇವಣಸಿದ್ಧಪ್ಪ ಜಲಾದೆ, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಕಾರ್ಯದರ್ಶಿ ಬಸವರಾಜ ಪವಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕುಶಾಲ್ ಪಾಟೀಲ್ ಗಾದಗಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜು ಬಿರಾದಾರ್, ನಗರ ಘಟಕದ ಅಧ್ಯಕ್ಷರಾಜಕುಮಾರ್ ಚಿದ್ರಿ, ಪ್ರಮುಖರಾದ  ಶಶಿ ಹೊಸಳ್ಳಿ, ಶಿವಪುತ್ರ ವೈದ್ಯ, ಉಪೇಂದ್ರ ದೇಶಪಾಂಡೆ, ಸುಭಾಷ್ ಮಡಿವಾಳ್ ಇದ್ದರು.

ಬಜರಂಗ ದಳ ವಿಜಯೋತ್ಸವ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಜರಂಗ ದಳ ಕಾರ್ಯಕರ್ತರು ನಗರದಲ್ಲಿ ಗುರುವಾರ ವಿಜಯೋತ್ಸವ ಆಚರಿಸಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿದರು. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು. ಬಜರಂಗ ದಳ ಜಿಲ್ಲಾ ಸಂಚಾಲಕ ಮಹೇಶ್ವರ್ ಸ್ವಾಮಿ, ನಗರ ಸಂಚಾಲಕ ನಿಲೇಶ್ ರಕ್ಷಾಳ್, ಪ್ರಮುಖರಾದ ಚಂದ್ರಶೇಖರ್ ಗಾದಾ, ಸುನೀಲ್ ಕಟಗಿ, ವಿನೋದ್ ಪಾಟೀಲ್, ರಾಜಕುಮಾರ್ ಜಮಾದಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry