ಗುಜರಾತ್‌ನಲ್ಲಿ ಮಾರುತಿ ಘಟಕ

ಭಾನುವಾರ, ಮೇ 26, 2019
30 °C

ಗುಜರಾತ್‌ನಲ್ಲಿ ಮಾರುತಿ ಘಟಕ

Published:
Updated:

ಅಹಮದಾಬಾದ್(ಪಿಟಿಐ): ಜಪಾನಿನ ಸುಜುಕಿ ಮೋಟಾರ್ ಕಾರ್ಪೊರೇಷನ್   (ಎಸ್‌ಎಂಸಿ) ಈಗ ಗುಜರಾತ್‌ನತ್ತ ಕಣ್ಣು ನೆಟ್ಟಿದೆ. ಇಲ್ಲಿ ಅದು ರೂ. 4000 ಕೋಟಿ ಬಂಡವಾಳ ಹೂಡಲು ಸಜ್ಜಾಗಿದೆ.`ಎಸ್‌ಎಂಸಿ~ ಅಧ್ಯಕ್ಷ ಒಸಮು ಸುಜುಕಿ ಆಗಸ್ಟ್ 24ರಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ `ಮಾರುತಿ ಸುಜುಕಿ ಇಂಡಿಯ~ ಮೂಲಕ ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಚರ್ಚಿಸಲಿದ್ದಾರೆ.ರಾಜ್ಯದ ಮಂಡಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಮಾರುತಿ ಕಾರು ತಯಾರಿಸುವ ನೂತನ ಘಟಕ ನೆಲೆಗೊಳ್ಳುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವೂ ಈಗಾಗಲೇ ಮಾರುತಿಗೆ 230 ಎಕರೆ ಭೂಮಿಯನ್ನೂ ಮೀಸಲಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry