ಗುಜರಾತ್‌ನಿಂದ ಏಕಿಲ್ಲ: ಕಾಂಗ್ರೆಸ್

5

ಗುಜರಾತ್‌ನಿಂದ ಏಕಿಲ್ಲ: ಕಾಂಗ್ರೆಸ್

Published:
Updated:

ರಾಂಚಿ (ಪಿಟಿಐ): ಗುಜರಾತ್ ಅಥವಾ ಇತರ ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಬಿಟ್ಟು ಬಿಹಾರದಿಂದಲೇ ಅಡ್ವಾಣಿ ಅವರು ರಥಯಾತ್ರೆಯನ್ನು ಆರಂಭಿಸಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.`ಈ ವಿಷಯವನ್ನು ಅಡ್ವಾಣಿ ಅವರು ಸ್ಪಷ್ಟಪಡಿಸಬೇಕು. ಅವರ ಪ್ರಕಾರ ಬಿಹಾರ ಭ್ರಷ್ಟಾಚಾರ ರಹಿತ ರಾಜ್ಯ ಎಂದಾದರೆ ಗುಜರಾತ್‌ನಂತಹ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಇರುವುದು ಭ್ರಷ್ಟ ಸರ್ಕಾರಗಳೇ~ ಎಂದು ಎಐಸಿಸಿ ವಕ್ತಾರ ಶಕೀಲ್ ಅಹಮದ್ ಕೇಳಿದ್ದಾರೆ.`ಬಿಹಾರದಿಂದ ರಥಯಾತ್ರೆ ಆರಂಭಿಸಲು ಅಡ್ವಾಣಿ ಅವರಿಗೆ ಅವಕಾಶ ನೀಡಿದ್ದಕ್ಕಾಗಿ ನಿತೀಶ್ ಕುಮಾರ್ ಅವರೂ ಜನರಿಗೆ ವಿವರಣೆ ನೀಡಬೇಕು. ಗೋಧ್ರಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಸದಾ ನರೇಂದ್ರ ಮೋದಿ ಅವರಿಂದ ನಿತೀಶ್ ಅಂತರ ಕಾಯ್ದುಕೊಳ್ಳಬಯಸುತ್ತಾರೆ. ಆದರೆ ಈಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿರುವ ವಿಷಯವನ್ನು ಅವರು ಮರೆತುಬಿಟ್ಟಿದ್ದಾರೆಯೇ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry