ಸೋಮವಾರ, ಜುಲೈ 26, 2021
23 °C

ಗುಜರಾತ್‌ ಉದ್ವಿಗ್ನ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್‌ ಉದ್ವಿಗ್ನ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಅಹಮದಾಬಾದ್ (ಪಿಟಿಐ): ಇತರೆ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪಟೇಲ್‌ ಸಮುದಾಯ ಬುಧವಾರ  ಕರೆದಿದ್ದ ಬಂದ್‌ ವೇಳೆ ಗುಜರಾತ್‌ನ ಅನೇಕ ಕಡೆ ನಡೆದ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ.

‘ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಸೇನೆಯನ್ನು ಕರೆಸಲಾಗಿದ್ದು, ಅಹಮದಾಬಾದ್‌, ಸೂರತ್‌, ರಾಜ್‌ಕೋಟ್‌, ಮೆಹಸಾನ್‌, ಪಟಾನ್‌, ಪಾಲಂಪುರ್‌, ಉಂಝಾ, ವಿಸ್‌ನಗರ ಹಾಗೂ ಜಾಮ್‌ ನಗರಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.ಪಟೇಲ್‌ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಕಾನೂನು ಹಾಗೂ ಸುವ್ಯವಸ್ಥೆ ನಿಯಂತ್ರಿಸುವುದಕ್ಕೆ ಸೇನೆಯ  ತುಕಡಿಗಳನ್ನು ಕರೆಸಲಾಗಿದ್ದು, ಅರೆ ಸೇನಾಪಡೆಯ ಸುಮಾರು 50ಸಾವಿರ ಸಿಬ್ಬಂದಿಯನ್ನು ಕೂಡ  ನಿಯೋಜಿಸಲಾಗಿದೆ ಎಂದು ಅಹಮದಾಬಾದ್‌ ಜಿಲ್ಲಾಧಿಕಾರಿ ರಾಜ್‌ಕುಮಾರ್‌ ಬೇಣಿವಾಲ್‌ ಗುರುವಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.