ಗುಜರಾತ್‌ ಭವನದಲ್ಲಿ ಶ್ರೀಗಂಧದ ಪರಿಮಳ!

7

ಗುಜರಾತ್‌ ಭವನದಲ್ಲಿ ಶ್ರೀಗಂಧದ ಪರಿಮಳ!

Published:
Updated:

ಹುಬ್ಬಳ್ಳಿ: ಗುಜರಾತ್‌ ಭವನದಲ್ಲಿ ಇನ್ನು ಒಂದು ವಾರದ ಕಾಲ ಶ್ರೀಗಂಧದ ಕಂಪಿನ ಘಮ, ಬಗೆಬಗೆಯ ಸೋಪು, ಅಗರ­ಬತ್ತಿಗಳ ಪರಿಮಳ ತುಂಬಲಿದೆ.ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಆಯೋ­ಜಿಸಿರುವ ‘ಸೋಪ್‌ ಸಂತೆ’ಗೆ ಗುರುವಾರ ಚಾಲನೆ ದೊರೆಯಿತು. ಒಂದೇ ಸೂರಿನ ಅಡಿಯಲ್ಲಿ 38 ಬಗೆಯ ಉತ್ಪನ್ನಗಳನ್ನು ಮಾರಾಟಕ್ಕೆ ಇಡ­ಲಾಗಿದ್ದು, ಸೋಪಿನೊಂದಿಗೆ ಇನ್ನಿತರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ.ಸ್ನಾನಕ್ಕೆ ಬಳಸುವ ಸೋಪುಗಳಲ್ಲೇ ಹತ್ತಾರು ಬಗೆಯವು ಇಲ್ಲಿವೆ. ಮೈಸೂರು ಸ್ಯಾಂಡಲ್‌ ಸೋಪ್‌, ಗೋಲ್ಡ್‌, ಕ್ಲಾಸಿಕ್‌, ಮಿಲೇನಿಯಂ ಸರಣಿಗಳಲ್ಲಿ ಲಭ್ಯವಿದ್ದರೆ, ರೋಸ್‌, ವೇವ್‌ಲೈಮ್‌, ಹರ್ಬಲ್‌ ಕೇರ್‌ ಟರ್ಮರಿಕ್‌, ಕಾರ್ಬೊ­ಲಿಕ್‌ ಸಾಬೂನುಗಳನ್ನು ಸಹ ಪ್ರದ­ರ್ಶನದಲ್ಲಿ ಇಡಲಾಗಿದೆ.ಮಕ್ಕಳಿಗೆಂದೇ ತಯಾರಿಸಲಾದ ಮೈಸೂರು ಸ್ಯಾಂಡಲ್‌ ಬೇಬಿ ಸೋಪ್‌, ಬೇಬಿ ಪೌಡರ್‌, ದೊಡ್ಡವರಿಗಾಗಿ ಮೈಸೂರು ಟಾಲ್ಕ್‌ ಇದೆ. ಬಟ್ಟೆ ತೊಳೆ­ಯಲು ಡಿಟರ್ಜೆಂಟ್‌ ಪೌಡರ್‌, ಸೋಪ್‌­­ಗಳ ಜೊತೆಗೆ ಸುವಾಸನೆಯುಕ್ತ ಅಗರಬತ್ತಿಗಳ ಕಂಪು ಇಲ್ಲಿದೆ. ದೇವ ಪ್ರಿಯ ಆಸ್ತಿಕರಿಗಾಗಿ ಧೂಪ್‌ ಉತ್ಪನ್ನ­ವನ್ನು ಸಹ ಕೆಎಸ್‌ಡಿಎಲ್‌ ಪರಿ­ಚಯಿ­ಸಿದೆ. ಇದಲ್ಲದೆ ಪರಿಮಳಯುಕ್ತ ಶ್ರೀ­ಗಂಧದ ಎಣ್ಣೆ, ಶ್ರೀ­ಗಂಧದ ಸಸಿಗಳನ್ನೂ ಮಾರಾಟಕ್ಕೆ ಇಡ­ಲಾಗಿದೆ.ಇದೇ 19ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಮಾರಾಟವಿರುತ್ತದೆ. ಅಂತರರಾಷ್ಟ್ರೀಯ ಗುಣಮಟ್ಟದ, ರೂ. 740 ಮುಖಬೆಲೆಯ ಮೈಸೂರು ಸ್ಯಾಂಡಲ್‌ ಮಿಲೇನಿಯಂ ಇಲ್ಲಿ ರೂ. 580ಕ್ಕೆ ಸಿಗು­ತ್ತದೆ. ಉಳಿದ ಉತ್ಪನ್ನಗಳ ಮಾರಾ­ಟಕ್ಕೂ ರಿಯಾಯಿತಿ ಇದೆ.

ಉದ್ಘಾಟನೆ: ಶಾಸಕ ವಿನಯ್‌ ಕುಲಕರ್ಣಿ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವ­ರಾಜ ಹೊರಟ್ಟಿ ಮೇಳವನ್ನು  ಉದ್ಘಾ­ಟಿಸಿ­­ದರು.‘ವಿದ್ಯಾರ್ಥಿ ನಿಲಯ­ಗಳ ಸಹಿತ ಸರ್ಕಾರದ ಎಲ್ಲ ಅಂಗ­ಸಂಸ್ಥೆ­ಗಳು ಕೆಎಸ್‌­ಡಿಎಲ್‌ ಉತ್ಪನ್ನಗಳನ್ನೇ ಖರೀ­ದಿಸುವಂತೆ ಆದೇಶ ಹೊರ­ಡಿಸ­ಬೇಕು’ ಎಂದು ಆಗ್ರ­ಹಿಸಿದರು.‘ಕೆಎಸ್‌ಡಿಎಲ್‌ ಸರ್ಕಾರಿ ಸಂಸ್ಥೆ­ಯಾ­ಗಿ­ದ್ದು, ಇಲ್ಲಿ ಕಮಿಷನ್ ವ್ಯವಸ್ಥೆ ಇಲ್ಲದ ಕಾರಣ ಕೆಲವು ಸಂಸ್ಥೆಗಳು ಖಾಸಗಿ ಸಂಸ್ಥೆ­ಗಳ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರು­­­ತ್ತಿವೆ. ಈ ಕುರಿತು ಮುಂಬ­ರುವ ಅಧಿವೇಶನದಲ್ಲಿ ಸರ್ಕಾರದ ಗಮ­ನಕ್ಕೆ ತರುತ್ತೇನೆ’ ಎಂದು ಅವರು ಹೇಳಿ­ದರು. ಸುರ­ಕ್ಷಿತ ಪ್ರದೇಶಗಳಲ್ಲಿ ಶ್ರೀಗಂಧ ಬೆಳೆ­ಯಲು ಸರ್ಕಾರ ಆದ್ಯತೆ ನೀಡಬೇಕು ಎಂದರು.ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇ­­­­­­ಶಕ ಎ.ಸಿ. ಕೇಶವಮೂರ್ತಿ, ಉಪ ಪ್ರಧಾನ ವ್ಯವಸ್ಥಾಪಕ ಸಿ.ಎಂ. ಸುವರ್ಣ­ಕುಮಾರ್‌, ಲೀನಾ ಮಿಸ್ಕಿನ್‌, ಮುಖ್ಯ ಅರಣ್ಯ ಸಂರ­ಕ್ಷಣಾ­ಧಿಕಾರಿ ಮಹೇಶ ಶಿರೂರ್‌ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry