ಗುಜರಾತ್ ಅಧಿಕಾರಿ ಸಂಜೀವ ಭಟ್ ಗೆ ಅಮಾನತು ಶಿಕ್ಷೆ

7

ಗುಜರಾತ್ ಅಧಿಕಾರಿ ಸಂಜೀವ ಭಟ್ ಗೆ ಅಮಾನತು ಶಿಕ್ಷೆ

Published:
Updated:
ಗುಜರಾತ್ ಅಧಿಕಾರಿ ಸಂಜೀವ ಭಟ್ ಗೆ ಅಮಾನತು ಶಿಕ್ಷೆ

ಗಾಂಧಿನಗರ (ಐಎಎನ್‌ಎಸ್): ಗೋಧ್ರಾ ದುರಂತದ ಸಂದರ್ಭದಲ್ಲಿನ ಗುಜರಾತ್  ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಣ್ಣ ಬಯಲು ಮಾಡಿ ಖ್ಯಾತಿಗಳಿಸಿದ್ದ ಗುಜರಾತ್ ಸೇವೆಗೆ ಸೇರಿದ್ದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಭಟ್ ಅವರನ್ನು ಸೋಮವಾರ ತಡರಾತ್ರಿ ಸೇವೆಯಿಂದ ಅಮಾನತ್ತಿನಲ್ಲಿಡಲಾಗಿದೆ. ಹಿಂದೆ 2002ರಲ್ಲಿ ಗೋಧ್ರಾ ರೈಲು ದುರಂತಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಪ್ರತಿಕಾರದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದ ಸಭೆಯಲ್ಲಿ ತಾವು   ಭಾಗವಹಿಸಿದ್ದಾಗಿ ಹೇಳಿದ ಕಾರಣ ಅವರು  ಪ್ರಸಿದ್ಧಿಗೆ ಬಂದಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry