ಶುಕ್ರವಾರ, ಮೇ 14, 2021
21 °C

ಗುಜರಾತ್ ಉಪಚುನಾವಣೆ: ಬಿಜೆಪಿ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಪಿಟಿಐ): ಗುಜರಾತಿನಲ್ಲಿ  ಲೋಕಸಭೆಯ ಎರಡು ಮತ್ತು ವಿಧಾನಸಭೆಯ ನಾಲ್ಕು ಸೇರಿ ಒಟ್ಟು 6 ಸ್ಥಾನಗಳಿಗಾಗಿ ನಡೆದ ಉಪಚುನಾವಣೆಗಳಲ್ಲಿ ಪ್ರಾರಂಭಿಕ ಸೂಚನೆಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಸ್ಥಾನಗಳು ಈ ಹಿಂದೆ ಕಾಂಗ್ರೆಸ್ ಕೈಯಲ್ಲಿ ಇದ್ದವು.ಬುಧವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿದ್ದು, ಎರಡು ಗಂಟೆಗಳ ಎಣಿಕೆಯ ಬಳಿಕ ಪೋರ್ ಬಂದರ್ ಮತ್ತು ಬನಸ್ಕಾಂತ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಮುಂದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.ಜೇತ್ಪುರ್, ಲಿಂಬಾಡಿ, ಧೋರ್ಜಿ ಮತ್ತು ಮೋರ್ವಾ ಹದಫ್ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ. ಭಾನುವಾರ ಈ ಆರೂ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆದಿದ್ದವು.ಪೋರ್ ಬಂದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಠ್ಠಲ್ ರಡಾಡಿಯಾ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ವಿನು ಅಮಿಪಾರಾ ಅವರಿಗಿಂತ 50,000 ಮತಗಳಿಂದ ಮುಂದಿದ್ದರು.ಬನಸ್ಕಾಂತ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹರಿಭಾಯಿ ಚೌಧರಿ ಅವರು ಪ್ರತಿಸ್ಪರ್ಥಿ ಕೃಷ್ಣಾ ಗಢವಿ ಅವರಿಗಿಂತ 55,000 ಮತಗಳಿಂದ ಮುಂದಿದ್ದರು. ಕೃಷ್ಣಾ ಅವರ ಪತಿ ಮುಖೇಶ್ ಗಢವಿ ನಿಧನದ ಕಾರಣ ಇಲ್ಲಿ ಉಪಚುನಾವಣೆ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.