ಗುಜರಾತ್: ಐಪಿಎಸ್ ಅಧಿಕಾರಿ ಬಂಧನ

7

ಗುಜರಾತ್: ಐಪಿಎಸ್ ಅಧಿಕಾರಿ ಬಂಧನ

Published:
Updated:
ಗುಜರಾತ್: ಐಪಿಎಸ್ ಅಧಿಕಾರಿ ಬಂಧನ

ಅಹ್ಮದಾಬಾದ್ (ಪಿಟಿಐ): ನರೇಂದ್ರ ಮೋದಿ ವಿರುದ್ಧ ಗೋಧ್ರಾ ಘಟನೆ ನಂತರದ ಗಲಭೆಗಳನ್ನು ಪ್ರಚೋದಿಸಿದ ಆರೋಪ ಹೊರಿಸಿದ್ದ ಅಮಾನತುಗೊಂಡ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಶುಕ್ರವಾರ ಬಂಧಿಸಲಾಯಿತು.ಪೊಲೀಸ್ ಕಾನ್‌ಸ್ಟಬಲ್ ಡಿ.ಪಂತ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ. 2002 ಗೋಧ್ರಾ ಗಲಭೆ ನಿರ್ವಹಣೆ ವೇಳೆ ಭಟ್ ಮೇಲ್ವಿಚಾರಣೆಯಡಿ ಪಂತ್ ಕೆಲಸ ಮಾಡಿದ್ದರು.ಸರ್ಕಾರಿ ನೌಕರನಿಗೆ ಬೆದರಿಕೆ ಹಾಕಿದ, ಸುಳ್ಳು ಸಾಕ್ಷ್ಯ ಹೆಣೆದ ಹಾಗೂ ಅಕ್ರಮವಾಗಿ ದಿಗ್ಬಂಧನದಲ್ಲಿ ಇರಿಸಿದ ಆರೋಪಗಳನ್ನು ಭಟ್ ವಿರುದ್ಧ ಹೊರಿಸಲಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry