ಗುಜರಾತ್ ಗಲಭೆ : ನಾರಾಯಣನ್-ವಾಜಿಪೇಯಿ ಪತ್ರ ಬಹಿರಂಗಕ್ಕೆ ಕೋರ್ಟ್ ತಡೆ

ಸೋಮವಾರ, ಜೂಲೈ 15, 2019
25 °C

ಗುಜರಾತ್ ಗಲಭೆ : ನಾರಾಯಣನ್-ವಾಜಿಪೇಯಿ ಪತ್ರ ಬಹಿರಂಗಕ್ಕೆ ಕೋರ್ಟ್ ತಡೆ

Published:
Updated:

ನವ ದೆಹಲಿ (ಐಎಎನ್ಎಸ್): 2002ರಲ್ಲಿ ನಡೆದ ಗುಜರಾತ್ ಗಲಭೆ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಹಾಗೂ ಪ್ರಧಾನಿ ಎ.ಬಿ. ವಾಜಿಪೇಯಿ ಅವರ ನಡುವಿನ ಪತ್ರ ವ್ಯವಹಾರಗಳನ್ನು ಬಹಿರಂಗಪಡಿಸಬೇಕೆಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನಿರ್ಧಾರವನ್ನು ದೆಹಲಿ ನ್ಯಾಯಾಲಯ ತಡೆ ನೀಡಿದೆ.

 ಸಿಐಸಿ ಅದೇಶದ ವಿರುದ್ಧ 8ನೇ ಆಗಸ್ಟ್ 2006ರಂದು ಕೇಂದ್ರ ಸರ್ಕಾರ ಹೂಡಿದ್ದ ಧಾವೆಯನ್ನು ನ್ಯಾ. ಅನಿಲ್ ಕುಮಾರ್ ಎತ್ತಿ ಹಿಡಿದರು. 2002ರ ಫೆ 28ರಿಂದ ಮಾರ್ಚ್ 15ರವರೆಗೆ ನಾರಾಯಣನ್ ಅವರಿಗೆ ವಾಜಿಪೇಯಿ ಅವರು ಬರೆದ ಅಷ್ಟೂ ಪತ್ರಗಳನ್ನು ಬಹಿರಂಗ ಪಡೆಸಬೇಕೆಂದು ಸಿಐಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಿ.ರಮೇಶ್ ಅವರ ಮೂಲಕ ಕೋರಿತ್ತು.~ಅಧ್ಯಕ್ಷ ಹಾಗೂ ಪ್ರಧಾನಿ ನಡುವಿನ ಪತ್ರ ವ್ಯವಹಾರವನ್ನು ಬಹಿರಂಗಪಡಿಸಲು ಅರ್ಜಿದಾರ (ಸರ್ಕಾರ)ರಿಗೆ ಸೂಚಿಸಲು ಸಿಐಸಿಗೆ ಯಾವುದೇ ಅಧಿಕಾರವಿಲ್ಲ~ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry