ಗುಜರಾತ್ ಬಿಜೆಪಿಗೆ, ಹಿಮಾಚಲಪ್ರದೇಶ ಕಾಂಗ್ರೆಸ್‌ಗೆ

7

ಗುಜರಾತ್ ಬಿಜೆಪಿಗೆ, ಹಿಮಾಚಲಪ್ರದೇಶ ಕಾಂಗ್ರೆಸ್‌ಗೆ

Published:
Updated:

ಅಹಮದಾಬಾದ್/ಶಿಮ್ಲಾ (ಪಿಟಿಐ):ಸಾಕಷ್ಟು ಕೂತುಹಲ ಕೆರಳಿಸಿದ್ದ ಗುಜರಾತ್ ಹಾಗೂ ಹಿಮಾಚಲಪ್ರದೇಶಗಳ ವಿಧಾನಸಭಾ ಚುನಾವಣಾ ಫಲಿತಾಂಶ ಗುರುವಾರ ಮಧ್ಯಾಹ್ನದ ಹೊತ್ತಿಗೆ ನಿಚ್ಚಳ ಸ್ಥಿತಿಗೆ ಬರುತ್ತಿದ್ದು, ಗುಜರಾತ್‌ನಲ್ಲಿ ಮೋದಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದದರೆ ಹಿಮಾಚಲಪ್ರದೇಶದಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.ಮಣಿನಗರ ಕ್ಷೇತ್ರದಿಂದ ನರೇಂದ್ರಮೋದಿ ಸಂಜೀವ್‌ಭಟ್ ಅವರ ಪತ್ನಿ ಶ್ವೇತಾ ಭಟ್ ಅವರಿಗಿಂತ ಭಾರಿ ಅಂತರದಿಂದ ಜಯ ಸಾಧಿಸಿದ್ದರೆ ಅತ್ತ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಪಿ.ಕೆ. ಧುಮಾಲ್ ಅವರು ಹಮ್ರಿಪುರ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ.ಆದರೆ  ಹಿಮಾಚಲ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿ ಸೋತು ಮುಖಭಂಗ ಅನುಭವಿಸಿದರೆ ಕಾಂಗ್ರೆಸ್ ಬಹುಮತ ಪಡೆದಿದೆ. ಆದರೆ  ಗುಜರಾತ್‌ನಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು ಮೋದಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ರಾಜ್ಯಗಳು

ಬಿಜೆಪಿ

ಕಾಂಗ್ರೆಸ್

ಇತರೆ

ಗುಜರಾತ್ 

ಒಟ್ಟು ಕ್ಷೇತ್ರ 182

121

56

04

ಹಿಮಾಚಲಪ್ರದೇಶ 

ಒಟ್ಟ ಕ್ಷೇತ್ರ 68

26

36

06

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry