ಗುಜರಾತ್ : ಮತದಾನ ಶಾಂತಿಯುತ

7

ಗುಜರಾತ್ : ಮತದಾನ ಶಾಂತಿಯುತ

Published:
Updated:

ಅಹಮದಾಬಾದ್ (ಐಎಎನ್‌ಎಸ್): ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಗುರುವಾರ ಬೆಳಿಗ್ಗೆ ಆರಂಭವಾಗಿದ್ದು, ಶಾಂತಿಯುತವಾಗಿ ನಡೆಯುತ್ತಿದೆ.ರಾಜ್ಯದ ಒಟ್ಟು 182 ಕ್ಷೇತ್ರಗಳ ಪೈಕಿ 87 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಬಿಗಿ ಭದ್ರತೆ ನಡುವೆ ನಡೆಯುತ್ತಿದ್ದು, ಮಧ್ಯಾಹ್ನದವರೆಗೆ ಶೇ. 20 ರಷ್ಟು ಮತದಾನವಾಗಿದೆ ಎಂದು ಹೆಚ್ಚುವರಿ ಚುನಾವಣಾಧಿಕಾರಿ ಅಶೋಕ ಮನೆಕಾ ಅವರು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಹಾಗೂ ಗುಜರಾತ್ ಪರಿವರ್ತನಾ ಪಕ್ಷದ ಅಧ್ಯಕ್ಷ ಕೇಶೂಬಾಯ್‌ಪಟೇಲ್ ಅವರು ರಾಜಕೋಟ್‌ನಲ್ಲಿ ಮತದಾನ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry