ಮಂಗಳವಾರ, ನವೆಂಬರ್ 19, 2019
28 °C

`ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ'

Published:
Updated:

ಗದಗ: ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿಯಲ್ಲಿ ರಾಜ್ಯವನ್ನು ಅಭಿವೃದ್ಧಿಪಡಿಸಲಾಗು ವುದು ಎಂದು ಸಂಸದ ಪಿ. ಸಿ. ಗದ್ದಿಗೌಡರ ಹೇಳಿದರು.ತಾಲ್ಲೂಕಿನ ಹುಯಿಲಗೋಳ, ಹಿರೇಕೊಪ್ಪ, ಚಿಕ್ಕೊಪ್ಪ, ನರಸಾಪೂರ ನಾಗಸಮುದ್ರ, ಬೆನಕೊಪ್ಪ, ನಾಗರಾಳ, ನೀರಲಗಿ, ಗ್ರಾಮಗಳಲ್ಲಿ  ನರಗುಂದ ವಿಧಾನಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ. ಸಿ. ಪಾಟೀಲ ಪರ ಏರ್ಪಡಿ ಸಿದ್ದ ಪ್ರಚಾರ ಸಭೆಯಲ್ಲಿ ಮಾತ ನಾಡಿ, ಜನತೆ ಆರ್ಶೀವದಿಸಿದರೆ ಐದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಡಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಉತ್ತರ ಕರ್ನಾಟಕ ದವರೇ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.ವಿಧಾನಪರಿಷತ್ ಸದಸ್ಯ ಜಿ. ಎಸ್. ನ್ಯಾಮಗೌಡ ಮಾತನಾಡಿ, ಬಿಜೆಪಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದೆ ಎಂದರು.

ಸಿ. ಸಿ. ಪಾಟೀಲರ ಪುತ್ರ ಉಮೇ ಗೌಡ ಪಾಟೀಲ,  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲ, ಸದಸ್ಯೆ ಚಂಬವ್ವ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಎಸ್. ಕರಿಗೌಡರ, ಬಿಜೆಪಿ ನಾಯಕ ವಸಂತ ಮೇಟಿ, ಯುವ ಮುಂಡ ರಾಜುಗೌಡ ಹಾಜರಿದ್ದರು.ಬಿಜೆಪಿಗೆ ಸೇರ್ಪಡೆ

ನರಗುಂದ:
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ನೇತೃತ್ವದಲ್ಲಿ ನೂರಾರು   ಕಾರ್ಯ ಕರ್ತರು  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಮ್ಮುಖದಲ್ಲಿ ಬಿಜೆಪಿಗೆ  ಸೇರಿದರು.ಸಿಎಂ ಜಗದೀಶ ಶೆಟ್ಟರ್ ಅವರು ಕಾರ್ಯಕರ್ತರಿಗೆ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.  ಸಾಬಳೆ, ಲಕ್ಷ್ಮಣ ಮೋರೆ,  ಯಲ್ಲವ್ವ ಮೋಟೆ,  ಜಯಶ್ರಿ  ಹಾಂಗಿ, ವೆಂಕಟೇಶ ಮೋರೆ, ಪಾರವ್ವ ಸಾಬಳೆ, ಜೀಜಾಬಾಯಿ ಮೋರೆ, ಶ್ವೇತಾ ಮೋರೆ,  ವೆಂಕಟೇಶ ಸಾಬಳೆ,  ಮರೆಸಾಬ ನಧಾಪ, ಗಣಪತಿ ಬೆಂಗೇರಿ, ಯೋಗೇಶ ಬೆಂಗೇರಿ, ಬೀರಪ್ಪ ಬೆಂಗೇರಿ, ಲಕ್ಷ್ಮಣ ಸಾಬಳೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)