ಗುರುವಾರ , ನವೆಂಬರ್ 21, 2019
27 °C
ಬಿಜೆಪಿ ಹೊಸ ಮಂತ್ರ

ಗುಜರಾತ್ ಮಾದರಿ ಸಾಕು, ಗೋವಾ ಮಾದರಿ ಬೇಕು

Published:
Updated:

ಪಣಜಿ (ಪಿಟಿಐ): ಸದಾ ಗುಜರಾತ್ ಮಾದರಿ ಮಂತ್ರ ಜಪಿಸುವ ಬಿಜೆಪಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೋವಾ ಮಾದರಿ ಅನುಸರಿಸಲು ಮುಂದಾಗಿದೆ.

`ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು, ಎಲ್ಲ ಧರ್ಮಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸಂಘಟನೆ ಸಂಬಂಧ ಅವರ ಅಭಿಪ್ರಾಯ ಪಡೆದುಕೊಂಡಿತ್ತು. ಕೋಮುವಾದ ಪಕ್ಷವೆಂದೇ ಬಿಜೆಪಿಯನ್ನು ಬಿಂಬಿಸಲಾಗುತ್ತಿದೆ.ಆದರೆ, ನಿಜವಾಗಿ ನಮ್ಮ ಪಕ್ಷ ಹಾಗಲ್ಲ. ರಾಷ್ಟ್ರೀಯತೆಯ ಪಕ್ಷವಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗುವುದು. ಗೋವಾದಲ್ಲಿ ಅನುಸರಿಸಿದ ಈ ಮಾದರಿಯನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನುಸರಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆರತಿ ಮೆಹ್ರಾ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.`ಪೂರ್ವಗ್ರಹಪೀಡಿತರಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಮನವರಿಕೆ ಮಾಡಿಕೊಡಲಾಗುವುದು' ಎಂದು ಅವರು ಹೇಳಿದರು.ಕಳೆದ ವರ್ಷ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ರೋಮನ್ ಕೆಥೋಲಿಕ್ ಸಮುದಾಯಕ್ಕೆ ಸೇರಿದ ಎಂಟು ಜನರಿಗೆ ಪಕ್ಷದ ಟಿಕೆಟ್ ನೀಡಿತ್ತು.

ಇದರಿಂದಾಗಿ ಆ ಸಮುದಾಯದ ಬೆಂಬಲ ಗಳಿಸಿ, ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಇಡೀ ದೇಶದಾದ್ಯಂತ ಇದೇ ಸ್ಥಿತಿ ಇದೆ. ಆದ್ದರಿಂದ ಗೋವಾ ಮಾದರಿ ಅನುಸರಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)